Rafi Inspires
Writer
07/04/2023
ಇಸ್ಲಾಮಿಕ್ ಚರಿತ್ರೆಯಲ್ಲಿ ಐತಿಹಾಸಿಕ ದಿನವಾಗಿದೆ ಬದ್ರ್ ಅನುಸ್ಮರಣಾ ದಿನ. ಈ ಸಂದರ್ಭ ಭವ್ಯ ಭಾರತದ ಅತೀ ದೊಡ್ಡ ಬದ್ರ್ ಅನುಸ್ಮರಣಾ ದಿನಕ್ಕೆ ಸಾಕ್ಷಿಯಾಗುವ ಮರ್ಕಝ್ ನಾಲೆಜ್ ಸಿಟಿ ಜಾಮಿಯತುಲ್ ಫುತೂಹ್ ಗ್ರ್ಯಾಂಡ್ ಮಸ್ಜಿದ್.
ಮುತ್ತು ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಆಸಾರ್ ಗಳು ಸಹಿತ ವಿವಿಧ ಆಸಾರ್ ಗಳ , ಚರಿತ್ರಾರ್ಹ ಕುರುಹುಗಳು ಆಸಾರೇ ಮುಬಾರಕ್ ನಲ್ಲಿ ಸಂಸ್ಥಾಪಿಸುವ ಐತಿಹಾಸಿಕ ಕ್ಷಣ.
ದೇಶ ವಿದೇಶಗಳ ನೂರಾರು ಗಣ್ಯರ ಉಪಸ್ಥಿತಿ. ಭವ್ಯ ಭಾರತದ ವಿವಿಧ ರಾಜ್ಯಗಳ ಗಣ್ಯರ ಉಪಸ್ಥಿತಿ .
ಇವತ್ತು ಜುಮ್ಮಾ ಬಳಿಕ ಬದ್ರ್ ಅನುಸ್ಮರಣಾ ಸಂಗಮಕ್ಕೆ ಐತಿಹಾಸಿಕ ಕ್ಷಣಗಣನೆ.
Jamiul Futuh
19/02/2023
*ಬ್ರಿಟೀಷರು ಮತ್ತು ಆರೆಸ್ಸೆಸ್ ಜೊತೆಗಿರುವ ಜಮಾಅತೇ ಇಸ್ಲಾಮಿಯ ಅಕ್ರಮ ಸಂಬಂಧದ ಮೂಲ ಎಲ್ಲಿ*
✍️ರಾಫಿ ನಗರ
[email protected]
ಭಾಗ-1
14 ಜನವರಿ 2023 ರಂದು ಆರೆಸ್ಸೆಸ್ ಜೊತೆ ಜಮಾಅತೇ ಇಸ್ಲಾಮಿ ಬಳಗ ದೆಹಲಿಯಲ್ಲಿ ನಡೆಸಿದ ಗುಪ್ತ ಸಭೆ ತಿಂಗಳುಗಳ ಬಳಿಕ ಬಹಿರಂಗವಾಗಿದೆ. ಅಲಿಯಾರ್ ಖಾಸಿಮಿಯಂತಹ ನಕಲಿ ಮುಖಗಳು ಸಹಿತ ಹಲವು ಸಾಚಾಗಳು ಸಮರ್ಥನೆ ಗಿಳಿದರೆ , ಶಾಂತಿ ಪ್ರಕಾಶನ, ಸನ್ಮಾರ್ಗ ಯೂಟ್ಯೂಬ್ ಚಾನೆಲ್ ಸಹಿತ ಕೆಲವು ಇವರ ಸಾಚಾ ಮುಖ ಕಂಡವರು ಹುಬ್ಬೇರುವಂತೆ ಈ ಘಟನೆ ವ್ಯಾಖ್ಯಾನಿಸುತ್ತಿದ್ದಾರೆ. ಆದರೆ ಜಮಾಅತೇ ಇಸ್ಲಾಮಿಯ ಇತಿಹಾಸ ಒಂದು ಸುತ್ತು ನೋಡಿ ಬಂದರೆ ಇಂತಹ ಘಟನೆಗಳಲ್ಲಿ ಅಚ್ಚರಿಪಡುವಂತದ್ದು ಏನೂ ಇಲ್ಲ.
ಲಗತ್ತಿಸಿದ ದಾಖಲೆಯಿಂದಲೇ ಪ್ರಾರಂಭಿಸೋಣ. ಈ ದಾಖಲೆ ಪಾಕಿಸ್ತಾನದ ಸರ್ಕಾರದ ಅಧಿಕೃತ ಕಾನೂನು ವಿಭಾಗದ ವೆಬ್ ಸೈಟ್ ಗಳಲ್ಲಿ ಪೂರ್ಣವಾಗಿ ಲಭ್ಯವಿದೆ. 1953 ಜೂನ್ 19ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಅಹ್ಮದಿಯಾ ಖಾದಿಯಾನಿಗಳ ವಿರುದ್ದ ಆಂದೋಲನವಾಗಿ ಹಲವು ಖಾದಿಯಾನಿಗಳ ಹತ್ಯೆಯಾಗುತ್ತದೆ. ಆ ಘಟನೆಯ ವಿಶೇಷ ತನಿಖೆಗೆ ಪಾಕಿಸ್ತಾನ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಮುನೀರ್ ನಾಯಕತ್ವದಲ್ಲಿ ತನಿಖೆಗಾಗಿ ಕಮೀಷನ್ ಒಂದನ್ನು ನೇಮಿಸುತ್ತದೆ. 1953 ಜುಲೈ ತಿಂಗಳಲ್ಲಿ ತನಿಖೆ ಕೈಗೆತ್ತಿಕೊಂಡ ಜಸ್ಟೀಸ್ ಮುನೀರ್ ಕಮಿಷನ್ 1954ಎಪ್ರಿಲ್ 10ರಂದು ವರದಿ ಸಲ್ಲಿಸುತ್ತದೆ. ಈ ವರದಿಯು ಮುನೀರ್ ಕಮಿಷನ್ ಎಂದು ಕರೆಯಲಾಗುತ್ತದೆ. 390ಕ್ಕೂ ಮಿಕ್ಕ ಪುಟಗಳನ್ನು ಹೊಂದಿರುವ ಈ ವರದಿ ಅಧ್ಯಯನಾಸಕ್ತರಿಗೆ ಹಲವು ಸತ್ಯಗಳು ತೆರೆದಿಡುತ್ತದೆ.
ಈ ವರದಿಯಲ್ಲಿ ಜಮಾಅತೇ ಇಸ್ಲಾಮಿ ಸ್ಥಾಪಕ ಸೈಯದ್ ಅಬುಲ್ ಆಲಾ ಮೌದೂದಿ ಮತ್ತು ಜಮಾಅತೇ ಇಸ್ಲಾಮಿಯ ನಾಯಕರು ಭಾರತೀಯ ಮುಸ್ಲಿಮರ ಜೀವಕ್ಕೆ ಅಂತಿಮ ಮೊಳೆಯೊಡೆಯುವಂತಹ ಹೇಳಿಕೆಯನ್ನು ಜಸ್ಟೀಸ್ ಮುನೀರ್ ಮುಂದೆ ದಾಖಲಿಸಿದ್ದು ಪೇಜ್ ನಂ 227ರ Reaction on Muslims of non muslims state ವರದಿ ಭಾಗದಲ್ಲಿ ದಾಖಲಿಸಿಟ್ಟಿದ್ದಾರೆ. ಈ ದಾಖಲೆಗಳು 70ವರ್ಷಗಳ ಬಳಿಕ ಈಗಲೂ ಪಾಕಿಸ್ತಾನದ ಸರ್ಕಾರಿ ವೆಬ್ಸೈಟ್ ಗಳಲ್ಲಿ ಲಭ್ಯವಿದೆ.
ಜಸ್ಟೀಸ್ ಮುನೀರ್ ಮೌದೂದಿಯ ಜೊತೆಗಿನ ನಡುವಿನ ಸಂಭಾಷಣೆ ಕೆಳಗೆ ಲಗತ್ತಿಸಿದ್ದು ಕನ್ನಡ ಅನುವಾದ :- ಪ್ರಶ್ನೆ: ಪಾಕಿಸ್ತಾನದಲ್ಲಿ ನೀವೇಳಿದಂತಹ ಇಸ್ಲಾಮಿಕ್ ದೇಶ ರಚಿತವಾದರೆ, ಹಿಂದೂಗಳಿಗೆ ಅವರ ಧರ್ಮಾನುಸಾರ ಇರುವ ಸಂವಿಧಾನ ಹೊಂದಿರುವ ಆಡಳಿತ ನಡೆಸಲು ನೀವು ಅನುಮತಿಸುವಿರೇ!?
ಮೌದೂದಿ: ಖಂಡಿತವಾಗಿಯೂ, ನನಗೆ ಯಾವ ವಿರೋಧವೂ ಇಲ್ಲ, ಭಾರತದಲ್ಲಿ ಮುಸ್ಲಿಮರನ್ನು ಎರಡನೇ ದರ್ಜಿಯ ಪ್ರಜೆಗಳಾಗಿ ,ಪೌರತ್ವ ನೀಡದೆ, ಹಿಂದೂ ಧರ್ಮದ ಮನುವಿನ ಸಿದ್ಧಾಂತ ತತ್ವದಂತೆ ಶೂದ್ರರ ರೀತಿ ,ಕೆಳವರ್ಗವಾಗಿ ಗುರುತಿಸುದರಲ್ಲಿ ನನಗೆ ಯಾವ ವಿರೋಧವೂ ಇಲ್ಲ, ಈ ಹೇಳಿಕೆಯ ಜೊತೆಗೆ ಭಾರತದಲ್ಲಿ ಸಧ್ಯ ಈ ರೀತಿಯಾಗಿದೆ ನಡೆಯುತ್ತಿರುವುದು ಎಂಬ ಸುಳ್ಳನ್ನೂ ಮೌದೂದಿ ಸೇರಿಸಿದರು.
ಇದೇ ವರದಿಯಲ್ಲಿ 2009ಜೂನ್ ತಿಂಗಳಲ್ಲಿ ಮರಣಹೊಂದಿದ ಜಮಾಅತೇ ಇಸ್ಲಾಮಿ ಅಮೀರ್ ಮೀಯಾನ್ ತುಫೈಲ್ ಮುಹಮ್ಮದ್ ನೀಡಿದ ಹೇಳಿಕೆಯು ಬಹಳ ಗಂಭೀರವಾಗಿದೆ.
ಪ್ರಶ್ನೆ:-ಜಗತ್ತಿನಲ್ಲಿ ಒಟ್ಟು ಮುಸ್ಲಿಂ ಜನಸಂಖ್ಯೆ ಎಷ್ಟು?
ಉತ್ತರ: 50ಕೋಟಿ .
ಪ್ರಶ್ನೆ:-ನೀವೇಳಿದ 50ಕೋಟಿ ಜನಸಂಖ್ಯೆ ಪ್ರಮುಖ ಮುಸ್ಲಿಂ ರಾಷ್ಟ್ರಗಳನ್ನು ಒಟ್ಟು ಸೇರಿಸಿದಾಗ ಸಿಗುವ ಜನಸಂಖ್ಯೆ 20ಕೋಟೀ ಆಗ್ಬಹುದು, ಉಳಿದ 30ಕೋಟಿ ಜನ ವಿವಿಧ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿ ನಿವೇಳಿದಂತೆ ಎರಡನೇ ದರ್ಜೆಯ ಪ್ರಜೆಗಳಾಗಿ ಮರ ಕಡಿಯುವವರಾಗಿಯೂ ,ನೀರು ಸೇದುವವರಾಗಿಯೂ ಜೀವಿಸುದಾದರೆ ಸಮಸ್ಯೆಯಿಲ್ಲವೇ?
ಉತ್ತರ:- ಅವರಿಗೆ ಏನು ಸಂಭವಿಸಿದರೂ ನನಗೆ ಸಮಸ್ಯೆಯಿಲ್ಲ, ನಮ್ಮ ಸಿದ್ಧಾಂತ ಅವರಿಗೆ ಏನು ನಡೆದರೂ ಅದು ಚಿಂತಿಸುವುದಿಲ್ಲ.
ಕಮೀಷನ್ ಪ್ರಶ್ನೆ:- ಜಗತ್ತಿನಾದ್ಯಂತ ಇರುವ ವಿವಿಧ ರಾಜ್ಯಗಳಲ್ಲಿರುವ ಅಲ್ಪಸಂಖ್ಯಾತ ಮುಸ್ಲಿಮರು ಪೌರತ್ವ ಕಳಕೊಳ್ಳುವ ಭೀತಿ ಮತ್ತು ಕೆಳಮಟ್ಟದ ಜೀವನದ ಸ್ಥಿತಿ ಬಂದರೆ ನಿಮಗೆ ಯಾವ ಸಮಸ್ಯೆಯೂ ಇಲ್ವಾ!?
ಉತ್ತರ :ಎಸ್ ,ಯಾವ ತೊಂದರೆಯೂ ಇಲ್ಲ.
ಅಬ್ಬಬ್ಬಾ : ಜಮಾಅತೇ ಇಸ್ಲಾಮಿಯಾ ಸ್ಥಾಪಕ ಮತ್ತು ಅಮೀರ್ ಪಾಕಿಸ್ತಾನದ ಕಮಿಷನ್ ಮುಂದೆ ಕೊಟ್ಟ ಹೇಳಿಕೆ ಜಾಗತಿಕವಾಗಿ ಮುಸ್ಲಿಮರು ಬೆರಗಾಗಿ ನೋಡಬೇಕಾಗಿದೆ. ಭಾರತೀಯ ಮುಸ್ಲಿಮರು ಭಾರತದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜೀವಿಸುದಕ್ಕಿಂತ ಆರೆಸ್ಸೆಸ್ ಸಿದ್ಧಾಂತದ ಶೂದ್ರರಿಗಿಂತಲೂ ಕಡೆಗಣನೆ ಯ ,ಪೌರತ್ವ ವಿಲ್ಲದ ಮುಸ್ಲಿಮರ ಬದುಕಿನ ಕಲ್ಪನೆಯಾಗಿದೆ ಜಮಾಅತೇ ಇಸ್ಲಾಮಿ ಸ್ಥಾಪಕ ಭಾರತೀಯ ಮುಸ್ಲಿಮರ ಕುರಿತಾಗಿ ಹೊಂದಿದ್ದು ಸತ್ಯ. ಈ ಕಮೀಷನ್ ವರದಿಯ ಬಳಿಕ ಅಬುಲ್ ಆಲಾ ಮೌದೂದಿ 25ವರ್ಷ ಅಂದರೆ 1979ರ ತನಕ ಜೀವಿಸಿದರೂ ಈ ವರದಿಯಲ್ಲಿನ ತನ್ನ ಹೇಳಿಕೆಯ ಬಗ್ಗೆ ಬಳಿಕದ ಭಾಷಣಗಳಲ್ಲಾಗಳಿ, ಹೇಳಿಕೆಯಾಗಲಿ, ಬರೆದ ಪುಸ್ತಕದಲ್ಲಾಗಲಿ ತಿಳಿಸಿಲ್ಲ. ಉತ್ತರ ಭಾರತದ ನಜಾತುಲ್ಲಾ ಸಿಧ್ಧೀಖಿ ಎಂಬ ಜಮಾಅತೇ ಅಮೀರ್ ಆಲಾ ಮೌದೂದಿ ಮರಣ ಬಳಿಕ ಆ ಹೇಳಿಕೆಯನ್ನು ನಿರಾಕಾರಿಸಲು ಪ್ರಯತ್ನಿಸಿದರೂ ಆಲಾ ಮೌದೂದಿ ತನ್ನ ಜೀವನ ಕಾಲದಲ್ಲಿ ನಿರಾಕರಿಸಿಲ್ಲ ಎಂಬುದು ಸತ್ಯ.
ಮುಂದಿನ ಬರಹದಲ್ಲಿ ಜಮಾಅತೇ ಇಸ್ಲಾಮಿ ಆರೆಸ್ಸೆಸ್ ನೊಂದಿಗಿನ ಗಪ್-ಚುಪ್ ಸಂಬಂಧದ ಕುರಿತಾಗಿ ,ಬಾಬರೀ ಮಸೀದಿ ಧ್ವಂಸವಾಗಿ ಮುಸ್ಲಿಂ ಸಮುದಾಯ ದುಃಖ ದಲ್ಲಿದ್ದಾಗಲೂ ದೆಹಲಿಯ ಅಶೋಕ್ ರಸ್ತೆಯಲ್ಲಿರುವ ಬಿಜೆಪಿ ಕಛೇರಿಯಲ್ಲಿ ಸುದೀರ್ಘ ಚರ್ಚೆ ನಡೆಸಿದ ವರದಿಗಳು, ಪತ್ರಿಕಾ ಹೇಳಿಕೆಗಳು, 1978ರಲ್ಲಿ ಪ್ರಭೋಧನ ಮಾಸೀಕದಲ್ಲಿ ಜಮಾಅತೇ ಇಸ್ಲಾಮಿ ಬರೆದ ಆರೆಸ್ಸೆಸ್ ಕುರಿತಾದ ಆಳ ಸಂಬಂಧದ ಮಾಹಿತಿ, ತುರ್ತು ಪರಿಸ್ಥಿತಿಯಲ್ಲಿ ಆರೆಸ್ಸೆಸ್ ಜೊತೆ ಜೈಲು ಹಂಚಿಕೊಂಡ ಜಮಾಅತೇ ಸದಸ್ಯರು ,ಈ ರೀತಿಯ ಭಾರತೀಯ ಮುಸ್ಲಿಮರ ಪಾಲಿನ ಕಪ್ಪು ಚುಕ್ಕೆಯಾಗಿದೆ ಜಮಾಅತೇ ಇಸ್ಲಾಮಿ. ಈ ನಾಮಧಾರಿ ಸಂಘಟನೆ ಆರೆಸ್ಸೆಸ್ ಜೊತೆ ಗುಪ್ತ ಮಾತುಕತೆ ಇತಿಹಾಸದುದ್ದಕ್ಕೂ ಮಾಡುತ್ತಲೇ ಬಂದಿದೆ. ಮುಂದಿನ ಬರಹದಲ್ಲಿ ಮತ್ತಷ್ಟು ಸವಿವಿವರದೊಂದಿಗೆ.....
https://chat.whatsapp.com/FMUJIUGYjxjK3zuvLvBjtI
15/02/2023
ಹಗಲಿರುಳು ದುಡಿದು ಸಾಧಿಸಿದ್ದೇನು!?
ಪ್ರತಿಯೊಬ್ಬ ಕೆ.ಸಿ.ಎಫ್ ಕಾರ್ಯಕರ್ತರಿಗೂ ಹೆಮ್ಮೆಯಿಂದ ,ಅಭಿಮಾನದಿಂದ ಹೇಳಿಕೊಳ್ಳಲು ಈ ಚಿತ್ರಗಳು ಸಾಕ್ಷಿಯಾಗಿದೆ. ಸಾರ್ಥಕ ದಶವರ್ಷಗಳು.
ಈ ಫೋಟೋ ಹೊರತಾದ ಸಾರ್ಥಕ ಸೇವೆ, ಸಾಂತ್ವನ ಸ್ಪರ್ಶ, ಶೈಕ್ಷಣಿಕ ಕ್ರಾಂತಿ, ಇವೆಲ್ಲಕ್ಕಿಂತಲೂ ಮಿಗಿಲಾಗಿ ಧಾರ್ಮಿಕ ಧ್ಯೇಯವನ್ನು ಎತ್ತಿ ಹಿಡಿದು ಸಜ್ಜನ ಸರಣಿಯೊಂದಿಗೆ ಅಹ್ಲುಸ್ಸುನ್ನದ ತತ್ವಾದರ್ಷದಲ್ಲಿ ಯುವ ಸಮೂಹವನ್ನು ಜೊತೆಯಾಗಿರಿಸಿದ ಸಂಘ ಶಕ್ತಿಯಾಗಿ ಇವತ್ತು ಕೆ.ಸಿ.ಎಫ್ ವಿವಿಧ ವಿದೇಶಿ ರಾಷ್ಟ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ.
ತಾಜುಲ್ ಉಲಮಾರ ಆತ್ಮೀಯ ಆಶಿರ್ವಾದ, ಬೇಕಲ್ ಉಸ್ತಾದ್ ಹೊತ್ತಿಸಿದ ಕಿಡಿ, ಸುಲ್ತಾನುಲ್ ಉಲಮಾರ ನೆರಳು ,ಉಲಮಾ ,ಉಮರಾಗಳ ಸ್ಪರ್ಷ ಕೆ.ಸಿ.ಎಫ್ ಹೆಮ್ಮರವಾಗಲು ಕಾರಣವಾಗಿದೆ. ನಿಷ್ಕಳಂಕ ಕಾರ್ಯಕರ್ತರು ಕೆ.ಸಿ.ಎಫ್ ಶಕ್ತಿಯಾಗಿದೆ. ಈ ದಿನ ಜನ್ಮ ನಾಡಿಗೆ ತಮ್ಮಿಂದಾಗುವ ಸಹಾಯ ಸಹಕಾರ ನೀಡುವ ಕೆ.ಸಿ ಎಪ್ ಕಾರ್ಯಕರ್ತರನ್ನು, ನಾಯಕರನ್ನು ಪ್ರಾರ್ಥನೆಗಳಲ್ಲೀ ಸೇರಿಸೋಣ.
✍️ರಾಫಿ ನಗರ
14/02/2023
ಪ್ರೀತಿಸುವುದಾದರೆ ವ್ಯರ್ಥವಾಗದ ಪ್ರೀತಿಯಾಗಿರಲಿ..
ಪ್ರೀತಿ ಸತ್ಯವಾಗಿದ್ದರೆ, ಮರಳಿ ಪಡೆಯಬಹುದಾದ ಪ್ರೀತಿಯಾಗಿರಲೀ.
ಪ್ರೀತಿಸುವುದಾದರೆ ಪ್ರತಿಕ್ಷಣದ ಪ್ರೀತಿಯಾಗಿರಲಿ.
ಸಾಮ್ಸಿ ಎಂಬ ಈ ಕುಗ್ರಾಮದ ಕುರಿತು ಒಂತಿಷ್ಟು ಮಾಹಿತಿ.
ಸಬಲೀಕರಣ ,ಬದಲಾವಣೆ, ಫಲಿತಾಂಶ .
ಇವಲ್ಲವೇ ಬದಲಾವಣೆ, ಇವಲ್ಲವೇ ಸಬಲೀಕರಣ. ಹಾಗಂತ ಇದರ ಚಾಲಕ ಶಕ್ತಿಯಾಗಿರುವ Suhairudeen Nurani زهيرالدين نوراني ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿಕೊಂಡು ಸಾಚಾರ್ ವರದಿ ಹಿಡಿದುಕೊಂಡು ವೆಸ್ಟ್ ಬೆಂಗಾಲ್ ಹೋದವರಲ್ಲ. ಆರ್ಥಿಕವಾಗಿ ಸ್ವಲ್ಪ ಸುಧಾರಿಸಿದ ಕುಟುಂಬವಾಗಿದೆ ಉಸ್ತಾದರದ್ದು. ಆದರೆ ಉಸ್ತಾದರ ಗುರು ಡಾ. ಹಕೀಂ ಅಝ್ಝರಿ ಇಂತಹ ಯುವ ಮನಸ್ಸುಗಳಿಗೆ ಬಡವರ ಮದ್ಯೆ ಮುತ್ತು ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಕಾಣಿರಿ ಎಂಬ ದಿವ್ಯ ಸಂದೇಶ ಮನಸ್ಸಿಗೆ ಅಚ್ಚೊತ್ತಿ ಕೊಟ್ಟಿದ್ದಾರೆ. ದಶವಾರ್ಷಿಕ ದ ಸಂಭ್ರಮದಲ್ಲಿರುವ ವೆಸ್ಟ್ ಬೆಂಗಾಳ್ ತ್ವೈಭಾ ಮರ್ಕಝ್ ಸಂದೇಶ ಜನಮನಸ್ಸುಗಳಿಗೆ ತಲುಪಲಿ.
ತುರ್ಕಿಯಲ್ಲಿ 5000ಸಾವಿರದಷ್ಟು ಜನರು ಭೀಕರ ಭೂಕಂಪದಲ್ಲಿ ಮರಣಹೊಂದಿದ್ದಾರೆ. ಈ ನಡುವೆ ತಂದೆಯೊಬ್ಬರು ತನ್ನ ಮಗುವಿಗೆ ಕೊನೆಯ ಉಚ್ಚಾರವಾಗಿ ಹೇಳಿ ಕೊಡುವ ಕಲಿಮತ್ತೌಹೀದ್ ವಿಶ್ವಾಸಿಗಳ ಹೃದಯ ಸ್ಥಂಭನವನ್ನೇ ಅನುಕಿಸುವಂತಿದೆ.
ಖುರ್ ಆನ್ ಈ ರೀತಿ ಭೂಮಿ ಪೂರ್ಣವಾಗಿ ನಡುಗಿಸುವ ದಿನವೊಂದನ್ನು ಈ ರೀತಿ ನೆನಪಿಸುತ್ತದೆ.
ಅಧ್ಯಾಯ: 56 ಶ್ಲೋಕ: 1
إِذَا وَقَعَتِ ٱلْوَاقِعَةُ
ಆ ಘಟನೆ (ಅಂತ್ಯ ದಿನ) ಸಂಭವಿಸಿದಾಗ.
ಅಧ್ಯಾಯ: 56 ಶ್ಲೋಕ: 2
لَيْسَ لِوَقْعَتِهَا كَاذِبَةٌ
ಅದರ ಸಂಭಾವ್ಯತೆಯನ್ನು ಸುಳ್ಳಾಗಿಸುವ ಯಾವನೂ ಇರಲಾರನು.
ಅಧ್ಯಾಯ: 56 ಶ್ಲೋಕ: 3
خَافِضَةٌۭ رَّافِعَةٌ
ಪತನ, ಉಚ್ಛ್ರಾಯದ ಘಟನೆ ¹.
ಅಧ್ಯಾಯ: 56 ಶ್ಲೋಕ: 4
إِذَا رُجَّتِ ٱلْأَرْضُ رَجًّۭا
ಅಂದರೆ ಭೂಮಿ ಬಲವಾಗಿ ನಡುಗಿಸಲ್ಪಟ್ಟಾಗ.
ಅಧ್ಯಾಯ: 56 ಶ್ಲೋಕ: 5
وَبُسَّتِ ٱلْجِبَالُ بَسًّۭا
ಪರ್ವತಗಳು ನುಚ್ಚುನೂರು ಮಾಡಲ್ಪಟ್ಟಾಗ.
ಅಧ್ಯಾಯ: 56 ಶ್ಲೋಕ: 6
فَكَانَتْ هَبَآءًۭ مُّنۢبَثًّۭا
ಹಾಗೆ ಅವು ಚದುರಿ ಹರಡಿದ ಧೂಳೀಪಟ ಗಳಾಗುವುವು.
ಅಧ್ಯಾಯ: 56 ಶ್ಲೋಕ: 7
وَكُنتُمْ أَزْوَٰجًۭا ثَلَٰثَةًۭ
ಆಗ ನೀವು ಮೂರು ಗುಂಪುಗಳಾಗಿ ವಿಂಗಡಿಸಲ್ಪಡುವಿರಿ.
ಅಧ್ಯಾಯ: 56 ಶ್ಲೋಕ: 8
فَأَصْحَٰبُ ٱلْمَيْمَنَةِ مَآ أَصْحَٰبُ ٱلْمَيْمَنَةِ
ಆಗ ಒಂದು ವಿಭಾಗ ಬಲ ವಿಭಾಗದವರು! ಬಲ ವಿಭಾಗದವರದ್ದು ಏನವಸ್ಥೆ !
ಅಧ್ಯಾಯ: 56 ಶ್ಲೋಕ: 9
وَأَصْحَٰبُ ٱلْمَشْـَٔمَةِ مَآ أَصْحَٰبُ ٱلْمَشْـَٔمَةِ
ಎಡ ವಿಭಾಗದವರು! ಎಡ ವಿಭಾಗದವರ ಪರಿಸ್ಥಿತಿಯೇನು?
ಅಧ್ಯಾಯ: 56 ಶ್ಲೋಕ: 10
وَٱلسَّٰبِقُونَ ٱلسَّٰبِقُونَ
(ಸತ್ಯವಿಶ್ವಾಸ ಹಾಗೂ ಸತ್ಕರ್ಮದಲ್ಲಿ) ಮುನ್ನಡೆ ಸಾಧಿಸಿದವರು (ಪರಲೋಕದಲ್ಲೂ) ಮುನ್ನಡೆದವರು.
ಅಧ್ಯಾಯ: 56 ಶ್ಲೋಕ: 11
أُو۟لَٰٓئِكَ ٱلْمُقَرَّبُونَ
ಅವರು ಅಲ್ಲಾಹನ ಸಾಮೀಪ್ಯ ಪಡೆದವರಾಗಿರುವರು.
ಅಧ್ಯಾಯ: 56 ಶ್ಲೋಕ: 12
فِى جَنَّٰتِ ٱلنَّعِيمِ
ಸಂಪತ್ಸಮೃದ್ಧ ಸ್ವರ್ಗೋದ್ಯಾನಗಳಲ್ಲಿ (ಅವರು ವಾಸಿಸುವರು.)
ವಿವರಣೆ:
Get App https://qurankannada.page.link/app
ಈ ರೀತಿ ಖುರ್ ಆನ್ ಎಚ್ಚರಿಸುತ್ತಲೇ ಇರುವ ಆಯತ್ ಗಳು ಮುಂದುವರಿಯುತ್ತದೆ.
ಅಲ್ಲಾಹನ ಸಾಮಿಪ್ಯ ಮತ್ತು ವಿಜಯಿ ಗಳ ಸಾಲಿನಲ್ಲಿ ಸೇರಲಿಚ್ಚಿಸುವ ನಾವು ಸಂಕಷ್ಟಗಳು ಒಂದೊಂದಾಗಿ ಎರಗುವಾಗ ಮಗುವಿನ ತಂದೆಯಷ್ಟಾದರೂ ಈಮಾನ್ ,ವಿಶ್ವಾಸ ಭದ್ರಪಡಿಸಬೇಕಿದೆ.
https://chat.whatsapp.com/FMUJIUGYjxjK3zuvLvBjtI
05/02/2023
*ಸೂಕ್ಷ್ಮತೆ ಅಂದರೆ ಏನು!? ಈ ಇಖ್ಲಾಸಿನ ಕೈಗಳಿಗೆ ಶಕ್ತಿ ತುಂಬಬೇಕಾದವರು ಯಾರು!?*
ಅಜ್ಮೀರ್ ಮೌಲಿದ್ ದಿನ, ದಾರುಲ್ ಇರ್ಷಾದಿನ ಅಜ್ಮೀರ್ ಮೌಲೀದ್ ಅಂದರೆ ಅದೊಂದು ಆತ್ಮೀಯತೆ ಮತ್ತು ಇತಿಹಾಸವುಳ್ಳ ಆತ್ಮೀಯ ನಾಯಕತ್ವದ ನಾಯಕತ್ವದಲ್ಲಿರುವ ಮಜ್ಲಿಸ್ ಎಂಬುದು ಜನಜನಿತ. ಅಜ್ಮೀರ್ ಮೌಲೀದ್ ಬಂತೆಂದರೆ ಝೈನುಲ್ ಉಲಮಾ ವಿಶ್ವಾಸಿಗಳಿಗೆ ತಬರ್ರುಕ್ ಆಗಿ ಕೊಡುವ ಅನ್ನದಾನದ ತಯಾರಿಗೆ ಬೇಕಾಗಿ ಎಲ್ಲವೂ ನೇರ ನೋಟದಲ್ಲಿ ತಯಾರಾಗಬೇಕೆಂಬ ಧೃಢ ನಿಶ್ಚಯ ಇರುವ ವ್ಯಕ್ತಿತ್ವ. ಕೊನೆಗೆ ಬೆಂಕಿಪೊಟ್ಟಣ ,ಕಟ್ಟಿಗೆ ಎಲ್ಲವೂ ತಾನೇ ಮುಂದೆ ನಿಂತು ಸಜ್ಜುಗೊಳಿಸುವ ಆ ಆವೇಶ, ಆ ಮಹಾನರಿಗೆ ಅದರಲ್ಲಿರುವ ಆಸಕ್ತಿ ಈ ಬರಹದಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲ. ಅದು ಅಲ್ಲಿ ನೇರ ಕಂಡವರಿಗೆಲ್ಲರಿಗೂ ಇರುವ ಒಂದು ಸತ್ಯ ಮತ್ತು ಅಷ್ಟೇ ವಾಸ್ತವ ಸಂಗತಿ.
ಅಜ್ಮೀರ್ ಮೌಲಿದ್ ದಿನವೂ ಅದೇ ರೀತಿ ವಿಶ್ವಾಸಿಗಳಿಗೆ ಅಜ್ಮೀರ್ ಖ್ವಾಜಾರ ಹೆಸರಲ್ಲಿ ಕೊಡುವ ಅನ್ನದಾನ ತಯಾರು ಮಾಡುವ ಕಡೆ ಗಮನಹರಿಸುತ್ತಲೇ ಇರುತ್ತಾರೆ. ಎಷ್ಟೇ ಗೌರವಾನ್ವಿತ ಅತಿಥಿಗಳು ಉಸ್ತಾದರ ಭೇಟಿಗೆ ಕಾಯುತ್ತಿದ್ದರೂ ಉಸ್ತಾದರು ಜನಸಾಮಾನ್ಯರೊಂದಿಗೆ ಬೆರೆತು ಅವರ ಸುಖ ಸಂತೋಷ ಮಾತನಾಡುತ್ತಾ ಅವರ ಹೊಟ್ಟೆ ತಣಿಸುವ ಕಾರ್ಯದಲ್ಲಿ ನಿರತರಾಗುತ್ತಾರೆ. ಈ ವರ್ಷದ ದಾರುಲ್ ಇರ್ಷಾದಿನ ಅಜ್ಮೀರ್ ಮೌಲಿದ್ ನಲ್ಲಿ ನೇರವಾಗಿ ಭಾಗಿಯಾಗಲು ಅಸಾಧ್ಯವಾದರೂ ,ಲೈವ್ ಮುಖಾಂತರ ಉಸ್ತಾದರ ಮಾತನ್ನು ಆಲಿಸುವಾಗ ಉಸ್ತಾದರು ಹೇಳುತ್ತಿದ್ದ ಮಾತು , "ಎಲ್ಲರೂ ಅಜ್ಮೀರ್ ಖ್ವಾಜಾರ ಹೆಸರಲ್ಲಿ ನಿಮಗಾಗಿ ತಯಾರಿಸಿದ ಆಹಾರ ಸೇವಿಸಿ ಹೋಗಬೇಕು, ಆಹಾರ ಸೇವಿಸಿ ಯಾರಿಗಾದರೂ ಹಸಿವಾಗುವುದಾದರೆ ಮತ್ತೊಮ್ಮೆ ಆಹಾರ ಸೇವಿಸಿ" ಎಷ್ಟೊಂದು ಸೂಕ್ಷ್ಮತೆಯಿದೆ ಈ ಮಾತುಗಳಿಗೆ. ಇಂತಹ ನಿಷ್ಕಳಂಕ ಉಸ್ತಾದರಿಂದ ನೇರವಾಗಿ ಅನುಭವಕ್ಕೆ ಬಂದ ಘಟನೆಯೊಂದು ನಿಮ್ಮೊಂದಿಗೆ ಹಂಚಿಕೊಳ್ಳಬೇಕು.
*ಕಳೆದ ವರ್ಷದ ಅಜ್ಮೀರ್ ಮೌಲಿದ್ ಕಳೆದು ಒಂದೆರಡು ದಿನವಾಗಿದೆ. ಅಜ್ಮೀರ್ ಮೌಲಿದ್ ಭಾಗವಾಗಿ ಸಂಸ್ಥೆಗೆ ನಾನಾ ಕಡೆಗಳಿಂದ ಭಕ್ಷ್ಯ ಸಾಮಾಗ್ರಿಗಳು ಹರಕೆಯ ರೂಪದಲ್ಲಿ ಸಂಸ್ಥೆಗೆ ವಿಶ್ವಾಸಿಗಳು ತಲುಪಿಸುತ್ತಾರೆ. ಈ ರೀತಿ ತಲುಪಿಸಿದ ಸಾಮಾಗ್ರಿಗಳಲ್ಲಿ ಸಾಕಷ್ಟು ತೆಂಗಿನಾಕಾಯಿಗಳು ಇರುವುದುಂಟು. ಅವುಗಳ ಸಿಪ್ಪೆಯನ್ನು ತೆಗೆದು ಸಿಪ್ಪೆಯನ್ನು ಅಗತ್ಯ ಇರುವವರು ಸಂಸ್ಥೆಗೆ ಹದಿಯಾ ನೀಡಿ ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ಸಿಪ್ಪೆಗಳನ್ನು ಕೊಂಡೊಯ್ಯುವ ಸಾಲಿನಲ್ಲಿ ಶೈಖುನಾ ಝೈನುಲ್ ಉಲಮಾ ಕೂಡಾ ತನ್ನ ಮನೆಗೆ ಒಂದು ಸಣ್ಣ ಟೆಂಪೋ ತೆಂಗಿನಾಕಾಯಿ ಸಿಪ್ಪೆಯು ನೀರು ಕಾಯಿಸಲು ಅಗತ್ಯವನ್ನು ಮನಗಂಡು ತಲುಪಿಸುವಂತೆ ಹೇಳುತ್ತಾರೆ. ಸಂಸ್ಥೆಯ ಭಕ್ಷ್ಯ ಸಾಮಾಗ್ರಿಗಳ ಆಗುಹೋಗುಗಳನ್ನು ಸಂಸ್ಥೆಯ ಖಾದೀಂ ಆಗಿ ನೋಡಿಕೊಳ್ಳುವ ಸಿದ್ದೀಕ್ ಹಾಜಿ ಕಬಕರವರಲ್ಲಿ ಆ ತೆಂಗಿನಕಾಯಿ ಸಿಪ್ಪೆಯ ಹಣ ಹಾಗೂ ಮನೆಗೆ ತಲುಪಿಸುವ ಟೆಂಪೋದ ಬಾಡಿಗೆ ಝೈನುಲ್ ಉಲಮಾ ತನ್ನ ಕೀಸೆಯಿಂದ ತೆಗೆದು ಕೊಡುವಾಗ ,ಸಿದ್ದೀಕ್ ಹಾಜಿ ಆ ಹಣವನ್ನು ತೆಗೆಯಲು ಸ್ವಲ್ಪ ಹಿಂದೇಟು ಹಾಕಿ ,ಮ್ಯಾನೇಜರ್ ಮೂಲಕ ಹೇಳಿ ತೆಗೆಯುತ್ತೇನೆಂದು ಉಸ್ತಾದರಲ್ಲಿ ಹೇಳಿದಾಗ, ತನ್ನ ಭಾವದಲ್ಲಿ ಬದಲಾವಣೆಯೊಂದಿಗೆ ಝೈನುಲ್ ಉಲಮಾ ತನಗಿಂತ ದೊಡ್ಡ ತೀರ್ಮಾನ ವ್ಯಕ್ತಪಡಿಸುವವರು ಈ ಸಂಸ್ಥೆಯಲ್ಲಿದ್ದಾರೆಯೇ!? ಎಂದು ಮರು ಪ್ರಶ್ನೆ ಹಾಕಿ ಹಣ ಕೊಡುವಾಗ ಆ ಸನ್ನಿವೇಶಕ್ಕೆ ದೃಕ್ ಸಾಕ್ಷಿಯಾಗಿದ್ದೆನು.
ನಿಜವಾಗಿ ಸಾಮಾನ್ಯರು ಸಣ್ಣ ವಿಚಾರವಾಗಿ ಕಾಣುವ ಇಂತಹ ಸೂಕ್ಷ್ಮತೆಯ ವಿಚಾರಗಳಲ್ಲಿ ಝೈನುಲ್ ಉಲಮಾ ತನ್ನ ಮೈ ಮೇಲೆ ಸುರಿಯುವ ಬಿಸಿ ನೀರಲ್ಲೂ ಸಮುದಾಯದ ಹಕ್ಕು ಸೇರಬಾರದೆಂಬ ಧೃಢ ನಿಶ್ಚಯದಲ್ಲಿ ಸಂಸ್ಥೆಯನ್ನು ಇಖ್ಲಾಸಿನೊಂದಿಗೆ ಕಟ್ಟಿರುವ ವ್ಯಕ್ತಿತ್ವ ಎಂಬುದು ಸತ್ಯ. ಉಸ್ತಾದರ ಮಾತಿನಲ್ಲೇ ಕೇಳುವುದಾದರೆ ಸಂಸ್ಥೆಯಿಂದ ವೇತನ ಪಡೆದು ಜೀವಿಸುತ್ತಿಲ್ಲ, ಖರ್ಚು ವೆಚ್ಚಗಳಿಗೆ ,ತನ್ನ ಕಾರಿನ ಖರ್ಚು ಕೂಡಾ ವಿಶ್ವಾಸಿಗಳಿಂದ ತನಗೆ ಸಿಗುವ ಹದ್ಯಾದಿಂದ ಸರಿದೂಗಿಸಿಕೊಂಡು ,ತನ್ನ ಸಂಪತ್ತನ್ನೂ ಸಂಸ್ಥೆಗೆ ನೀಡಿ ಸಮುದಾಯದ ಸಬಲೀಕರಣದಲ್ಲಿ ಮಾಣಿ ಉಸ್ತಾದ್ ತೋರ್ಪಡಿಸಿದ ತ್ಯಾಗ ಅದು ಸಾಮಾನ್ಯರಾದ ನಾವು ಅರ್ಥೈಸಲು ಬಹಳಷ್ಟು ಕಷ್ಟವಿದೆ.
ಒಂದು ಕಡೆ ಶೈಖುನಾ ಝೈನುಲ್ ಉಲಮಾರ ವಯಸ್ಸು , ಮಗದೊಂದೆಡೆ ಸಂಸ್ಥೆಯ ಭಾರ , ಮತ್ತೊಂದು ಕಡೆ ದಾರುಲ್ ಇರ್ಷಾದ್ ಮೂಲಕ ಸಮುದಾಯದಲ್ಲಿರುವ ನಿರೀಕ್ಷೆ.ಇವೆಲ್ಲವೂ ಪೂರೈಸಲು ಆ ಇಖ್ಲಾಸಿನ ಕೈಗಳಿಗೆ ಶಕ್ತಿ ನೀಡಬೇಕಾಗಿರುವುದು ಅನಿವಾರ್ಯವಾಗಿದೆ.
*ಇದೀಗ ಸಂಸ್ಥೆಯು ತನ್ನ ಖರ್ಚುವೆಚ್ಚಗಳಲ್ಲಿ ಹೆಚ್ಚಿನ ಭಾರವಾಗಿ ಕಾಣುವ ವಿದ್ಯುತ್ ಬಿಲ್ ಗೆ ಒಂದು ಸಣ್ಣ ಮಟ್ಟಿನ ಪರಿಹಾರ ಕಾಣುವ ಯೋಜನೆ ಯೋಚಿಸಿದೆ. ಸುಮಾರು 80ಸಾವಿರ ರುಪಾಯಿಗಳು ಮಾಸಿಕವಾಗಿ ದಾರುಲ್ ಇರ್ಷಾದ್ ಗೆ ಬರುವ ವಿದ್ಯುತ್ ಬಿಲ್. 7200ಯೂನಿಟ್ ಆಗಿದೆ ವಿದ್ಯುತ್ ದಾರುಲ್ ಇರ್ಷಾದಿಗೆ ಮಾಸಿಕವಾಗಿ ಅಗತ್ಯ ಕಾಣುವುದು. ಒಬ್ಬ ವಿಶ್ವಾಸಿಯು 500ರೂಪಾಯಿ ನೀಡಿ ಒಂದು ಯೂನಿಟ್ ವಿದ್ಯುತ್ ಜವಾಬ್ದಾರಿ ವಹಿಸಿಕೊಂಡರೆ ಮುಂದಿನ 25ವರ್ಷಗಳು ಹೊಸದಾಗಿ ಹಾಕಿಕೊಳ್ಳುವ ಸೋಲಾರ್ ಸಿಸ್ಟಮ್ ಮೂಲಕ ದಾರುಲ್ ಇರ್ಷಾದಿನಲ್ಲಿ ವಿದ್ಯುತ್ ಪ್ರಸರಣ ತಮ್ಮ ಸ್ವದಕದ ಹಣದಿಂದ ಉಪಯೋಗಕ್ಕೆ ಸಿಗಲಿದೆ. ಆ ಮೂಲಕ ಸಂಸ್ಥೆಯಲ್ಲಿ ಕಲಿಯುವ ಹಾಫಿಳ್ ಗಳು, ದಅವಾ ವಿಧ್ಯಾರ್ಥಿಗಳು, ಮಸ್ಜೀದ್ ನಲ್ಲಿ ನಡೆಯುವ ಧಾರ್ಮಿಕ ಎಲ್ಲಾ ಆಗು ಹೋಗುಗಳಲ್ಲಿ ಬೆಳಗುವ ಬೆಳಕು ಇದಕ್ಕಾಗಿ ಸಹಕರಿಸುವವರ ಜೀವನದ ಸದುದ್ದೇಶಗಳು ಬೆಳಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾರಣ ಈ ಸಂಸ್ಥೆಯ ಸಾರಥಿಯ ಕೈಗಳು ಶುದ್ಧವಾಗಿದೆ. ಆ ಕೈಗಳು ಇಲಾಹನೆಡೆಗೆ ಸಹಕಾರಿಗಳನ್ನು ನೆನಪಿಸುತ್ತಾ ಸಹಸ್ರಾರು ಮುತ ಅಲ್ಲಿಮ್ ಗಳ ಮುಂದೆ ಪ್ರಾರ್ಥಿಸುವಾಗ ಇಲಾಹನು ಆ ಕೈಗಳನ್ನು ಕೈಬಿಡಲು ಸಾಧ್ಯವಿಲ್ಲ.
ಮೂವತ್ತು ಲಕ್ಷ ಖರ್ಚು ತಗಲುವ ಈ ಯೋಜನೆಯೊಂದಿಗೆ ಕೈಜೋಡಿಸಿ ಝೈನುಲ್ ಉಲಮಾರ ಕೈಗಳನ್ನು ಬಲಪಡಿಸೋಣ.
ಸಂಸ್ಥೆಯ ಈ ಯೋಜನೆಯೊಂದಿಗೆ ಕೈ ಜೋಡಿಸುವವರು ಗೂಗಲ್ ಪೇ, ಫೋನ್ ಪೇ ಮೂಲಕ ತಮ್ಮ ಸಹಕಾರ ನೀಡಲು ಇಚ್ಚಿಸುವವರು .
9764122891-sabith Na
9164266981-abdul lathif
1Unit. - ₹500
2Unit. -₹1000
5Unit. -₹2500
10Unit-₹5000
✍️ರಾಫಿ ನಗರ
ತ್ವೈಭಾ ವೆಸ್ಟ್ ಬೆಂಗಾಲ್ ಧನ್ಯವಾಗಿದೆ.
ತನ್ನ 2ನೇ ವಯಸ್ಸಿನಲ್ಲಿ ಅನಾಥವಾದ ಮಗು ಆರಿಫ್.
ಆದರೆ ತ್ವೈಭಾದ ಮಡಿಲಲ್ಲಿ ಬೆಳೆದು ಉನ್ನತ ಕನಸಿನೊಂದಿಗೆ ತನ್ನ ಗುರಿಯತ್ತ ಸಾಗುತ್ತಿದೆ. ಇಂತಹ ನೂರಾರು ಚರಿತ್ರೆ ತ್ವೈಭಾದ ಮುಂದೆ ಹೇಳಲಿಕ್ಕಿದೆ. ಸಾಧ್ಯವಾದರೆ ತ್ವೈಭಾ ವೆಸ್ಟ್ ಬೆಂಗಾಳ್ ಶೈಕ್ಷಣಿಕ ಚಳುವಳಿಯಲ್ಲಿ ಭಾಗಿಯಾಗಿ. ಸಹಕಾರ ನೀಡಿ. ಇಲ್ಲವೇ ಇತರರಿಗೆ ಈ ಸಂದೇಶ ತಲುಪಿಸಿ.
*4ರಾಜ್ಯಗಳಲ್ಲಿ 25ಕ್ಕೂ ಮಿಕ್ಕ ಶೈಕ್ಷಣಿಕ ಸಮುಚ್ಚಯ ಹೊಂದಿರುವ ಸಂಸ್ಥೆ. 4ಸಮನ್ವಯ ಶಿಕ್ಷಣ ಸಮುಚ್ಚಯ. 2 ಪ್ರಮುಖ ಅನಾಥಾಲಯಗಳು , ಒಟ್ಟು 983ಮೋರಲ್ ಅಕಾಡೆಮಿಗಳು. ಇಲ್ಲಿರುವ ಒಟ್ಟು ವಿಧ್ಯಾರ್ಥಿಗಳು 40ಸಾವಿರಕ್ಕೂ ಮಿಕ್ಕಿದೆ. ಅದರಲ್ಲಿ ಪೂರ್ಣವಾಗಿ ತ್ವೈಭಾದ ವೀಕ್ಷಣೆಯಲ್ಲಿರುವ ಮೋರಲ್ ಅಕಾಡೆಮಿಗಳು 493.ಇದರ ಪೂರ್ಣ ವಿಧ್ಯಾರ್ಥಿಗಳ ಸಂಖ್ಯೆ 25630.* ಇನ್ನುಳಿದಂತೆ ಖುರ್ ಆನ್ ಸ್ಟಡೀ ಸೆಂಟರ್ ಗಳು, ಮಹಿಳಾ ಕಾಲೇಜ್ ಗಳು.
ಸುಲ್ತಾನುಲ್ ಉಲಮಾ ಹಾಗೂ ಡಾ. ಅಬ್ದುಲ್ ಹಕೀಂ ಅಝ್ಝರೀ ಉಸ್ತಾದರ ಶಿಷ್ಯತ್ವ ಸ್ವೀಕರಿಸಿ 2009ರಲ್ಲಿ ಈ ಶೈಕ್ಷಣಿಕ ರಂಗಕ್ಕೆ ದುಮುಕಿದ ವ್ಯಕ್ತಿ ಆಗಿದ್ದಾರೆ ಡಾ. ಝುಹೈರುದ್ದೀನ್ ನೂರಾನಿ.
ಒಟ್ಟು ವೆಸ್ಟ್ ಬೆಂಗಾಲ್ ಮರ್ಕಝ್ ನ ತಿಂಗಳ ಖರ್ಚು 26ಲಕ್ಷದ 15ಸಾವಿರ ರುಪಾಯಿಗಳಾಗಿದೆ.
ಅನಾಥ ಮಕ್ಕಳ ಸಂರಕ್ಷಣೆ ಮಾಡುವವರು ಮತ್ತು ನಾನು ನಾಳೆ ಪರಲೋಕದಲ್ಲಿ ಬಹಳ ಹತ್ತಿರದ ಭಾಂದವ್ಯ ಉಳ್ಳವರಾಗಿದ್ದೇವೆ ಎಂಬ ಪ್ರವಾದಿ ವಚನಕ್ಕೆ ಸಾಕ್ಷಿಯಾಗಲು ನಿಮ್ಮಿಂದಾಗುವ ಸಹಕಾರ ತ್ವೈಭಾ ಕಾರ್ಯಚಟುವಟಿಕೆಗಳಲ್ಲಿರಲಿ.
ಅಲ್ಲಾಹು ಕಬೂಲ್ ಮಾಡಲಿ. ಸಾಚಾರ್ ವರದಿಯಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಲ್ಪಟ್ಟ ರಾಜ್ಯವಾಗಿದೆ ವೆಸ್ಟ್ ಬೆಂಗಾಲ್ ಎಂಬುದನ್ನು ಮರೆಯದಿರಿ. ಈ ಶೈಕ್ಷಣಿಕ ಚಟುವಟಿಕೆಗಳಲ್ಲದೆ ಸಾಂತ್ವನ ಸ್ಪರ್ಷ, ಮನೆ ನಿರ್ಮಾಣ, ಆರೋಗ್ಯ ಸೇವೆ ಈ ರೀತಿ ಮುಗಿಯದ ಬರಹ ರೂಪವಾಗಿದೆ ತ್ವೈಬಾ..
ನಿಮ್ಮಿಂದಾಗುವ ಸಹಕಾರ ನೀಡಿ ,ಇತರರಿಗೆ ಶೇರ್ ಮಾಡಿ ಸಂದೇಶ ಹಂಚಿಕೊಳ್ಳಿ.
✍️ರಾಫಿ ನಗರ
THAIBA ORPHANAGE
50200066016430
HDFC0001255
G Pay. 8167782881 (THAIBA ORPHANAGE)
8167782881@okbizaxis
wa.me/+918167782881
https://chat.whatsapp.com/FMUJIUGYjxjK3zuvLvBjtI
28/01/2023
ಅವರಿಗಿನ್ನೆಲ್ಲಿ ವಿಶ್ರಾಂತಿ...
ಎಸ್ ಎಸ್ ಎಫ್ ಕೇರಳ ರಾಜ್ಯ ಪ್ರತಿನಿಧಿಗಳ ಸಂಗಮವಾಗಿದೆ ಈ ದೃಶ್ಯಗಳು...(28/01/2023)
ರೋಗವು ಸಾಮಾನ್ಯವಾಗಿ ವಿಶ್ರಾಂತಿಗೆ ಕೊಂಡೊಯ್ಯಬಹುದು, ಆದರೆ ದೊಡ್ಡ ಕನಸುಗಳು ಹೊತ್ತು ಸಮುದಾಯದ ನಿರೀಕ್ಷೆ ಹೊತ್ತಿರುವ ಸುಲ್ತಾನುಲ್ ಉಲಮಾರ ಮುಂದೆ ರೋಗವು ಸೋಲಪ್ಪಿಕೊಳ್ಳಲೇಬೇಕು....
إِنَّمَا الْأَعْمَالُ بِالنِّيَّاتِ
ಗುರಿಯ ಮುಂದೆ ,ನಿರ್ಧಾರ ಅಚಲವಾಗಿ ದ್ದರೆ ಅಲ್ಲಾಹನು ಅನುಗ್ರಹಿಸುವನು.
ಅಲ್ ಹಮ್ದುಲಿಲ್ಲಾಹ್.
ಶೈಖುನಾ ರಿಗೆ ಪೂರ್ಣ ಆಫಿಯತ್ ಮತ್ತು ದೀರ್ಘಾಯುಷ್ಯ ನೀಡಿ ಅನುಗ್ರಹಿಸು ಅಲ್ಲಾಹ್ ಆಮೀನ್
https://chat.whatsapp.com/FMUJIUGYjxjK3zuvLvBjtI
Click here to claim your Sponsored Listing.
Category
Contact the public figure
Telephone
Website
Address
Pune