AR Krishnamurthy
Official Page of AR Krishnamurthy
Member of Karnataka Legislative Assembly
Kollegal Constituency
Official Page of AR Krishnamurthy
Member of the Karnataka Legislative Assembly
Kollegala Constituency Chamarajanagar
Ex - Chairman
Dr. B.R. Ambedkar Development Corporation Limited
Govt of Karnataka
★1994 Elected First time as Member of Legislative Assembly (MLA) from Santhemarahalli Constituency, Chamarajanagar
★1999 Elected Second time as Member of Legislative Assembly (MLA) from Santh
18/06/2026
ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಶೌರ್ಯದ ಪ್ರತೀಕವಾಗಿ ಭಾರತೀಯ ಇತಿಹಾಸದಲ್ಲಿ ಅಜರಾಮರರಾಗಿರುವ ವೀರವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
16/06/2026
ಇಂದು ಬಿಡದಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆಯಲ್ಲಿ ಭಾಗವಹಿಸಿ, ಮುಂಬರುವ ವಿಧಾನ ಪರಿಷತ್ ಚುನಾವಣೆ ಹಾಗೂ SIRಗೆ ಸಂಬಂಧಿಸಿದ ವಿಚಾರಗಳ ಕುರಿತು ನಡೆದ ಸಮಗ್ರ ಚರ್ಚೆಯಲ್ಲಿ ಪಾಲ್ಗೊಂಡ ಕ್ಷಣ.
Siddaramaiah DK Shivakumar
Randeep Singh Surjewala
B K Hariprasad
Indian National Congress - Karnataka
16/06/2026
ಇಂದು ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹೆಚ್. ವಿ ವೆಂಕಟೇಶ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಕ್ಷಣ.
16/06/2026
ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆಗಳ ರದ್ದತಿಯಿಂದ ಕಂಗೆಟ್ಟಿರುವ ಯುವಜನತೆಯ ಪರವಾಗಿ ಧ್ವನಿಯೆತ್ತಲು ಶ್ರೀ Gandhi ಅವರು ಸನ್ನದ್ಧರಾಗಿದ್ದಾರೆ. ನಾವೆಲ್ಲರೂ ಒಂದಾಗಿ ನಮ್ಮ ಹಕ್ಕನ್ನು ಪ್ರತಿಪಾದಿಸೋಣ.
💥 ಕೋಟಾ ಮೆಗಾ ಸಮಾವೇಶ
📅 17 ಜೂನ್, 2026
15/06/2026
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂತೆಮರಹಳ್ಳಿ ಹೋಬಳಿಗೆ ಒಳಪಡುವ ವಿವಿಧ ಗ್ರಾಮಗಳಾದ ಚುಂಗಡಿಪುರ, ಹೊಸಮೋಳೆ, ನಡಕಲು ಮೋಳೆ , ಕಾವುದವಾಡಿ, ತೆಳ್ಳನೂರು, ಬಾನಹಳ್ಳಿ ಗ್ರಾಮಗಳಿಗೆ 3 ಕೋಟಿಗೂ ಅಧಿಕ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಕ್ಷಣ.
ಈ ವೇಳೆ ಮಾತನಾಡಿ ಕಳೆದ ಮೂರು ವರ್ಷದಲ್ಲಿ 500 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಹಲವಾರು ಯೋಜನೆಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ, ಅಲ್ಲದೇ ಕ್ಷೇತ್ರದ ಎಲ್ಲಾ ವರ್ಗದ ಸಮುದಾಯಗಳಿಗೂ ಅನುದಾನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇನೆ. ಈಗಾಗಲೇ ಹಲವಾರು ನೀರಾವರಿ ಯೋಜನೆಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದೆನು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಎಚ್.ವಿ. ಚಂದು, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಮಹಾದೇವ ಪ್ರಸಾದ್, ಕಣ್ಣೆಗಾಲ ಮಾದೇಶ್, ಅನಂತು, ಚಿನ್ನಸ್ವಾಮಿ, ಲಕ್ಷ್ಮಿ, ಸವಿತಾ, ಚುಂಗಡಿಪುರ ನಟರಾಜ್, ಪಟೇಲ್ ನಟರಾಜ್, ಟಿ.ಎಸ್. ಕುಮಾರ್, ಲೋಕೇಶ್, ಸುಗಂಧರಾಜ್, ಸೋಮಣ್ಣ, ಶಿವಕುಮಾರ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
Indian National Congress - Karnataka
15/06/2026
ಕನ್ನಡದ ವೈಚಾರಿಕ ಪ್ರಜ್ಞೆಯಾಗಿದ್ದ ದಿವಂಗತ ಪಿ. ಲಂಕೇಶ್ ಅವರ ಸಾಹಿತ್ಯ ಹಾಗೂ ಪತ್ರಿಕೋದ್ಯಮದ ದಾರಿಗೆ ದೀಪವಾಗಿದ್ದ ಅವರ ಪತ್ನಿ ಇಂದಿರಾ ಲಂಕೇಶ್ ಅವರ ಅಗಲಿಕೆ ತೀವ್ರ ದುಃಖ ಉಂಟುಮಾಡಿದೆ.
ಪತ್ರಿಕೆಯ ಕಷ್ಟದ ಕಾಲದಲ್ಲಿ ಹೆಗಲು ಕೊಟ್ಟು, ಪ್ರಕಾಶನದ ಪ್ರತಿಯೊಂದು ಕೆಲಸವನ್ನೂ ಸ್ವತಃ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರ ಕಾರ್ಯಕ್ಷಮತೆ ಬೆರಗು ಮೂಡಿಸುವಂಥದ್ದು. ಲಂಕೇಶ್ ಅವರ ನಿಧನಾ ನಂತರವೂ ಧೃತಿಗೆಡದೆ ಲಂಕೇಶ್ ಪ್ರಕಾಶನವನ್ನು ಮುನ್ನಡೆಸಿಕೊಂಡು ಬಂದ ಅವರ ಧೀಮಂತಿಕೆ ಇಂದಿನ ತಲೆಮಾರಿಗೆ ಮಾದರಿ.
ಅವರ ಕುಟುಂಬದವರು ಮತ್ತು ಆತ್ಮೀಯರಿಗೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ದೊರಕಲಿ.
14/06/2026
ರಕ್ತವು ಜೀವದಾಯಕ. ರಕ್ತದಾನವು ಮಹಾದಾನಗಳಲ್ಲಿ ಶ್ರೇಷ್ಠವಾದದ್ದು. ರಕ್ತದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋಣ.
13/06/2026
असम में हुए विमान हादसे में भारतीय वायुसेना के 5 जवानों के शहीद होने का समाचार बेहद पीड़ादायक है।
इस कठिन समय में कांग्रेस परिवार की संवेदनाएं शोकाकुल परिजनों के साथ हैं।
ईश्वर से प्रार्थना है कि वे दिवंगत आत्माओं को अपने श्रीचरणों में स्थान दें और परिवार को यह दुख सहन करने की शक्ति प्रदान करें।
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ 4,000 ಇವಿಎಂಗಳು ಸುಟ್ಟು ಕರಕಲಾಗಿವೆ.
ಇದು ಆಕಸ್ಮಿಕವೋ ಅಥವಾ ವ್ಯವಸ್ಥಿತ ಸಾಕ್ಷ್ಯ ನಾಶದ ಆಟವೋ? ಚುನಾವಣಾ ಆಯೋಗವೇ ಉತ್ತರಿಸಿ!
ಇಂತಹ ಘಟನೆಗಳ ಹಿಂದೆ ರಾಜಕೀಯ ಉದ್ದೇಶವಿದೆಯೇ ಅಥವಾ ಆಡಳಿತಾತ್ಮಕ ಲೋಪವೇ ತನಿಖೆಯೇ ಉತ್ತರ ನೀಡಬೇಕು.?
12/06/2026
ವಿಶ್ವ ಬಾಲಕಾರ್ಮಿಕ ವಿರೋಧಿ ದಿನ
ಮಕ್ಕಳ ಭವಿಷ್ಯ ಶಾಲೆಯಲ್ಲೇ ರೂಪುಗೊಳ್ಳಬೇಕು, ಶ್ರಮದ ಸ್ಥಳಗಳಲ್ಲಿ ಅಲ್ಲ. ಪ್ರತಿಯೊಂದು ಮಗುವಿಗೂ ಶಿಕ್ಷಣ, ಸುರಕ್ಷತೆ ಮತ್ತು ಕನಸು ಕಾಣುವ ಹಕ್ಕಿದೆ. ಬಾಲಕಾರ್ಮಿಕ ಪದ್ಧತಿಗೆ ಅಂತ್ಯ ಹಾಡಿ, ಮಕ್ಕಳಿಗೆ ಉಜ್ವಲ ಭವಿಷ್ಯ ಕಟ್ಟಿಕೊಡುವ ಜವಾಬ್ದಾರಿ ನಮ್ಮೆಲ್ಲರದು.
ಬಾಲಕಾರ್ಮಿಕ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ.
Click here to claim your Sponsored Listing.
Category
Contact the public figure
Address
Mysore