H R Leelavathi
Smt. H.R.Leelavathi blessed with a mellifluous voice and immaculate diction, is the tallest figure i
22/06/2026
ಒಡೆಯ ನಿನ್ನಡಿಯೆಡೆಯ : ರಚನೆ - ಆನಂದಕಂದ
ಸಂಗೀತ ಸಂಯೋಜನೆ - ಪದ್ಮಚರಣ್
ಮೂಲಗಾಯನ - ಎಚ್ ಆರ್ ಲೀಲಾವತಿ
ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !
ಒಡೆಯ ನಿನ್ನಡಿಯೆಡೆಯ ಹುಡುಕುತಲಿ ನಡೆದಿಹೆನು
ಅಡಿಗಡಿಗೆ ದಾರಿಯೊಳು ತಡೆವಡೆಯುತಿಹೆ ನಾನು
ಹಲವು ಮುನಿಗಳು ನುಡಿದ ಹಲವು ಮಾತುಗಳಿಂದೆ
ಅಲುಗಾಡಿ ಮನವು ಉಯ್ಯಾತಿಯಾಡುವಂತಿಹೆನು||
ಹಂಬಲಿಸಿ ನಿನ್ನ ಕರೆದಾಗ್ಲೆ ಬಳಸಿ ಜನ
ಇಂದು ಬಿಡದೆಯೆ ನಡುವೆ ತುಂಬಿ ನಿಲುವರು ಚೆನ್ನ
ನಿನ್ನಡಿಯ ಹುಡಿಗಾಗಿ ಬಾಯಬಿಡುತಿಹ ನಾನು
ಮನ್ನಾ ಹುಡಿಯನೆ ಹೊಂದಿ ಮನದಾಸೆಗುಂದುವೆನು||
ನಿನ್ನ ಬಳಿಯಲಿ ಬೇಡಿಕೊಳುವೆನೊಂದೇ ಒಂದು
ನಿನ್ನೊಲುಮೆಗಣ್ಣಿಯಲಿ ಬಂಧಿಸೆನ್ನನು ಬಿಗಿದು
ಚೆನ್ನಾದ ದಾರಿಯೊಂದನ್ನು ತೋರಿಸಿ ನನ್ನ
ನಿನ್ನಡಿಗಳೆಡೆಯಲ್ಲಿ ಕರೆದುಕೊಳುವುದು ಚೆನ್ನ
ಜತಿಯಾ ಮೊಲಾಯಾ : ರಚನೆ - ಪುರುಷೋತ್ತಮ್ ದಾಸ್
ಸಂಗೀತ ಸಂಯೋಜನೆ - ದೇಬೆನ್ ಶರ್ಮ
ಮೂಲಗಾಯನ - ಎಚ್.ಆರ್. ಲೀಲಾವತಿ
ಇದು ಶ್ರೀ ಪುರುಷೋತ್ತಮ್ ದಾಸ್ ಅವರು, ಲೀಲಾವತಿಯವರಿಗಾಗಿಯೇ 1968 ರಲ್ಲಿ ಹೊಸದಾಗಿ ರಚಿಸಿದ ಅಸ್ಸಾಮೀ ಗೀತೆ.
ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !
ಜೊತಿಯಾ ಮೊಲಾಯಾ ಬೋಲೆ
ತುಮಾಲೋಯ್ ಮೊನೋತ್ ಪೊಡೆ
ಬಿನೊಂದಿಯಾ ರೂಪ್ ಮನೋಹರ್
ನೀಲಾ ಕೋಯ್ ಪೊಹಾರೊತೆ
ಓ ಜೀಕ್ ಮೀಕ್ ರೋದಾಲಿಯೆ
ಸೊತಿಯಾಯ್ ರೂಪಾಲಿ ಪೊಹೊರ್
ಕುಲುಕುಲು ನಿಝೋರಾರ್
ಮೋ ಭೋರಗಾನ್
ಪೊಹಾರೆ ಭೊಯಾಮೆ ಉಠೆ
ಮೃದು ಐಕೋಗಾನ್
ಮೊರುಸ್ಥಲಿ ಮೀಠಾದೀ ಥೋಕರ್ ॥
ತುಮಾರ್ ಸೊರೊಣ ಧುವಾ
ಲೂಯಿ ತೊರೆ ಪಾನಿ
ಬಿಪೊದೆ ಅಪೊದೆ ತಾರೆ
ಕಾಮಾಖ್ಯಾ ಗೋಹಾನಿ
ರಿಬ್ ರಿಬ್ ಮೊಲೊಯಾಯ್
ಜೇನ್ ಥಾಕೆ ಖಾಯ್
ಮಾಠೀರ್ ಮೊರೊಮ್ ಖಿನೀ
ಸೀರಾ ಮೊಧುಮೋಯ್
ಭಾರತೋರ್ ಪೂಬಾಲೀ ಪ್ರಾಂತೋರ್॥
ನೀನೇ ಅನಾದಿ ನಾನೇನು ಬೇಡಲಿ : ರಚನೆ - ಶಿಶುನಾಳ ಶರೀಫ್
ಸಂಗೀತ ಸಂಯೋಜನೆ ಮತ್ತು ಮೂಲಗಾಯನ - ಎಚ್ ಆರ್ ಲೀಲಾವತಿ
ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !
ನೀನೇ ಅನಾದಿ ನಾನೇನು ಬೇಡಲಿ
ಶಂಭೂ ಲಿಂಗ ಶಂಭೂ ಲಿಂಗ
ಮಾನವ ಜಲ್ಮಕ್ಕೆ ಬಂದು
ಏನೇನು ತಿಳಿಯಲಿಲ್ಲ ||ಶಂಭೂ ಲಿಂಗ ||
ಹಾವು ಹರಿದಾಡಿತು
ಚೇಳು ಕುಣಿದಾಡಿತು || ಶಂಭೂ ಲಿಂಗ ||
ಹಾವು ಚೇಳನು ನುಂಗೆ
ಕೋಳಿಯು ಕೂಗುವದು ||ಶಂಭೂ ಲಿಂಗ ||
ಪಕ್ಕವಿಲ್ಲದ ಪಕ್ಷಿ
ಗಗನದೊಳಾಡಿತು ||ಶಂಭೂ ಲಿಂಗ ||
ಅಕ್ಕರದಲಿ ಶಿವ
ನೋಡಿತಾ ನಗುತಿಹನು ||ಶಂಭೂ ಲಿಂಗ ||
ಮಾಯೆಯೆಂಬುದು ಮನೆ
ಮಾಡಿತು ದೇಹದೊಳು ||ಶಂಭೂ ಲಿಂಗ ||
ಮಾಯೆ ಇನ್ನಾವ ಕಾಲಕ್ಕೆ
ಪರಿಹಾರವಹುದು || ಶಂಭೂ ಲಿಂಗ ||
ಹರಿಸಿ ದೇವತೆಗಳಿಗೆ
ಬ್ರಹ್ಮನ ಕಾವಲು ||ಶಂಭೂ ಲಿಂಗ ||
ಗುರುಮಂತ್ರ ಬಲದಿಂದ
ಈ ಭಾವ ನೀಗುವುದು ||ಶಂಭೂ ಲಿಂಗ ||
ಕಲ್ಲ ದೇವರು ಕಣ್ಣು
ಮುಚ್ಚಿ ಕಾಪಾಡಿದವು ||ಶಂಭೂ ಲಿಂಗ ||
ಬಲ್ಲಿದ ಶಿಶುನಾಳಧೀಶನ
ದಯೆಯಿಂದ ||ಶಂಭೂ ಲಿಂಗ ||
ನಾದ ಸುಖಕರ : ರಚನೆ - ರಾಘವೇಂದ್ರ ಇಟಗಿ
ಸಂಗೀತ ಸಂಯೋಜನೆ - ಪದ್ಮಚರಣ್
ಮೂಲಗಾಯನ - ಎಚ್ ಆರ್ ಲೀಲಾವತಿ
ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !
ನಾದ ಸುಖಕರ ಪ್ರಿಯ ಸಖ
ನುಡಿಸು ವೀಣೆಯ ವೈಣಿಕ
ನೋವು ನರಳಿಕೆ ಕೊರಳ ಗಂಟೆಗೆ
ಜೀವ ಕೋಟಿಯು ಬೆದರಿದೆ.
ನೇಹ ತುಂಬಿದ ನಾದ ಮಂಜುಳ
ಸ್ನೇಹ ಧಾರೆಗೆ ಚದುರಿದ
ಪ್ರಾಣ ಶಕ್ತಿಗಳೆಲ್ಲ ಮರಳಲಿ
ದಿವ್ಯ ಚೇತನ ದಾಯಕ||_||
ಕಂಸ ಭೀತಿಯ ಕ್ರೂರ ಚೆರೈಗೆ
ಹಿಂಸೆ ಬಡುತಿಹ ಮನುಜನ
ಹೂವ ಹಂಬಲು ಕಮರಿ ಹೋಗಿದೆ
ಬಣ್ಣಗೆಟ್ಟಿದೆ ಮಧುವನ
ಖುಷಿಯ ಚಿಂತನ ನಿನ್ನ ಗಾಯನ
ಪ್ರಾಣ ತುಂಬಲಿ ವೈಣಿಕ ||_||
ಕಾಂತಿ ಹೀರಕ ಕರಗಿ ಹರಿಯಿತು
ಗಾನ ವಾಹಿನಿಯಾಗುತ
ಶಾಂತಿದಾಯಕ ಸೂರ್ಯ ಸಂಗಕೆ
ಪ್ರಾಣ ಪ್ರೇಮಿಯು ಬಾಗುತ
ನಂಬಿ ನಿಂತಿರೆ ಗಾನ ಬಂಧುವೆ
ತುಂಬು ನಾದೋನ್ಮಾದಕ ||_||
Click here to claim your Sponsored Listing.
Category
Contact the public figure
Website
Address
Mysore