News Kannada
ರಾಜಕೀಯ, ಕ್ರೀಡೆ, ಮನರಂಜನೆ, ತಂತ್ರಜ್ಞಾನ, ಆರೋಗ್ಯ ಮತ್ತು ಇನ್ನೂ ಹೆಚ್ಚಿನವುಗಳ ಇತ್ತೀಚಿನ ಸುದ್ದಿಗಳಿಗಾಗಿ Since then there has been no looking back. Passion rules!
We at newskarnataka.com and its sibling newskannada.com, proudly proclaim that the news portals were born out of passion and not out of commercial interest
ಕನ್ನಡ ಬರೀ ಕರ್ನಾಟಕದ ಭಾಷೆಯಲ್ಲ. ವಿಶ್ವವೇ ಕನ್ನಡದಲ್ಲಿಯೇ ಮಾತಿಗಿಳಿದು ಬಿಡುತ್ತದೆ. ತಾಯಿ ಕಲಿಸಿಕೊಟ್ಟ ಮೊದಲ ಅಕ್ಷರ 'ಅ'. ಮತ್ತೆ ತಾಯಿ ಭಾಷೆಯಲ್ಲಿಯೇ ಓದೋಣ, ಮಾತನಾಡೋಣ.
ಬನ್ನಿ ನಮ್ಮ ಜತೆ ಕೈ ಜೋಡಿಸಿ...
ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೋಧ್ಯಮ ಕೇವಲ ವ್ಯಾಪಾರ ವೃತ್ತಿಯಾಗುತ್ತಿರುವ ಹಿನ್ನೆಲೆ
ಮಂಗಳೂರು: ರಾತ್ರಿ 3 ಗಂಟೆಯವರೆಗೆ ಹೋಟೆಲ್ ಕಾರ್ಯಾಚರಣೆ
ನಗರದಲ್ಲಿ ಹೋಟೆಲ್‌ಗಳು ರಾತ್ರಿ 11.30 ಗಂಟೆಯವರೆಗೆ ಹಾಗೂ ಪ್ರವಾಸೋದ್ಯಮ ಪರವಾನಗಿ ಹೊಂದಿರುವ ಸಂಸ್ಥೆಗಳು ಮಧ್ಯರಾತ್ರಿ 12 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ಇದ್ದರೂ, ಹಲವು ಹೋಟೆಲ್‌ಗಳು ರಾತ್ರಿ 3 ಗಂಟೆಯವರೆಗೆ ವ್ಯಾಪಾರ ನಡೆಸುತ್ತಿವೆ ಎಂದು ಪ್ರಸನ್ನ ರವಿ ಆರೋಪಿಸಿದರು.
ಕಳೆದ ಐದು ದಿನಗಳಿಂದ ರಾತ್ರಿ ವೇಳೆ ನಗರದಲ್ಲಿ ಪರಿಶೀಲನೆ ನಡೆಸಿರುವುದಾಗಿ ಹೇಳಿದ ಅವರು, ಕೆಲವು ಹೋಟೆಲ್‌ಗಳು ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರಿಗೆ ಸೇವೆ ಒದಗಿಸುತ್ತಿವೆ ಎಂದು ದೂರಿದರು.
‘ಎಂಪೈರ್’ ಹೋಟೆಲ್ ವಿರುದ್ಧ ಆರೋಪ
ಎಂಪೈರ್ ಹೋಟೆಲ್‌ನ ನೆಲಮಾಳಿಗೆಯಲ್ಲಿ ಅಕ್ರಮವಾಗಿ ವ್ಯಾಪಾರ ನಡೆಸಲಾಗುತ್ತಿದ್ದು, ಪೊಲೀಸ್ ವಾಹನಗಳು ಆಗಮಿಸಿದಾಗ ಮುಂಭಾಗದ ಬಾಗಿಲು ಮುಚ್ಚಿ ಪಾರ್ಕಿಂಗ್ ಪ್ರದೇಶದ ಮೂಲಕ ಗ್ರಾಹಕರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಪ್ರಸನ್ನ ರವಿ ಆರೋಪಿಸಿದರು.
“ಇತ್ತೀಚೆಗೆ ಪೊಲೀಸರನ್ನು ಒಳಗೆ ಕಳುಹಿಸಿದಾಗ ಅಲ್ಲಿದ್ದ ಹಲವರು ಸ್ಥಳದಿಂದ ತೆರಳಿದರು. ಕೆಲವು ಸಂದರ್ಭಗಳಲ್ಲಿ ಮದ್ಯದ ಅಮಲಿನಲ್ಲಿದ್ದವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಕೆಳಮಟ್ಟದಲ್ಲಿ ನಡೆಯುತ್ತಿರುವ ‘ಹಪ್ತಾ’ ವ್ಯವಸ್ಥೆಯ ಕಾರಣದಿಂದಲೇ ಇಂತಹ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಸಾರ್ವಜನಿಕರ ಆರೋಪಗಳಿವೆ” ಎಂದು ಅವರು ಹೇಳಿದರು.
ಅಶ್ವಥ ಎಲೆಯಲ್ಲಿ ಮೂಡಿಬಂದ ಡಿಕೆಶಿ ಭಾವಚಿತ್ರ
ಉಡುಪಿ: ಮಹೇಶ್ ಮರ್ಣೆ ಉಡುಪಿ ಜಿಲ್ಲೆಯ ಪ್ರತಿಭಾವಂತ ಕಲಾವಿದ. ಅಶ್ವಥ ಎಲೆಯಲ್ಲಿ ಭಾವಚಿತ್ರ ಮೂಡಿಸುವುದರಲ್ಲಿ ಇವರು ಎತ್ತಿದ ಕೈ. ಅನೇಕ ಗಣ್ಯರು ಮತ್ತು ರಾಜಕೀಯ ನಾಯಕರ ಭಾವಚಿತ್ರಗಳನ್ನು ಎಲೆಯಲ್ಲಿ ಮೂಡಿಸಿ ಸೈ ಎನಿಸಿದ್ದಾರೆ.ಇದೀಗ
ನೂತನ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಅವರ ಭಾವಚಿತ್ರ ವನ್ನು ಅಶ್ವಥ ಎಲೆಯಲ್ಲಿ ರಚಿಸುವ ಮೂಲಕ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಮಹೇಶ್ ಮರ್ಣೆ ಯವರು ನೂತನ ಮುಖ್ಯಮಂತ್ರಿ ಯವರಿಗೆ ಅಭಿನಂದಿಸಿದ್ದಾರೆ.ಇದು ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
ಸಚಿವ ರಾಮಲಿಂಗ ರೆಡ್ಡಿ ರಾಜೀನಾಮೆ ವಿಚಾರ
ಮಂಗಳೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪತ್ರಿಕಾಗೋಷ್ಠಿ ಹೇಳಿಕೆ
ದಿನ ಹೋದ ಹಾಗೆ ಯಾರೆಲ್ಲ ರಾಜೀನಾಮೆ ಕೊಡ್ತಾರೆ, ಯಾರೆಲ್ಲ ಕಾಂಗ್ರೆಸ್ ಬಿಡ್ತಾರೆ
ಯಾರೆಲ್ಲ ಡಿಕೆ ಶಿವಕುಮಾರ್ ವಿರುದ್ಧ ಬಂಡೆ ಏಳ್ತಾರೆ
ಬಂಡೆಗೆ ಬಂಡೆ ಯಾರು ಸಮನಾಗಿ ನಿಲ್ಲುತ್ತಾರೆ, ಮುಂದಿನ ದಿನಗಳಲ್ಲಿ ಗೊತ್ತಾಗತ್ತೆ
ಕಳೆದ 3 ವರುಷಗಳಿಂದ ರಾಜ್ಯದಲ್ಲಿ ಆಡಳಿತ ಸರಿ ಇಲ್ಲಾ, ಸ್ವತ ಡಿಕೆ ಶಿವಕುಮಾರ ಹೇಳಿದ್ದಾರೆ
ವಿದ್ಯಾರ್ಥಿಗಳಿಗೆ ಬಸ್ ಪಾಸ್ ಕೊಡುತ್ತೇನೆ ಎಂದಿದ್ದಾರೆ
ಬಸ್ ಪಾಸ್ ಕೊಟ್ಟು ನಂತ್ರ ಹೇಳಿಕೆ ಕೊಡುವುದು ಒಳ್ಳೆಯದು
ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಟೀಕೆ
ಕೈಕಂಬ, ಮಂಗಳೂರು: ನಿರಂತರ ಮಳೆಯಿಂದಾಗಿ ಜಲಾವೃತಗೊಂಡ ಕೈಕಂಬ
ಫ್ಲೈ ಓವರ್ ಕೆಳಗಿನ ರಸ್ತೆಯಲ್ಲಿ ತುಂಬಿಕೊಂಡಿರುವ ನೀರು
ಇದು ಕೈಕಂಬ ದ 'ಪಂಪವೆಲ್' ಎಂದು ವ್ಯಂಗ್ಯವಾಡುತ್ತಿರುವ ಜನರು
ಎಡಪದವು, ಮಂಗಳೂರು: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಲಾವೃತಗೊಂಡ ಎಡಪದವು
ನೀರಿನಲ್ಲಿ ಮುಳುಗಿದ ವಾಹನಗಳು.
ಮಂಗಳೂರು: ಬೆಳಗಿನಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಹಿನ್ನಲೆ
ಜಲಾವೃತಗೊಂಡ ಕುಳೂರು ಬಸ್ ನಿಲ್ದಾಣ
ದಕ್ಷಿಣ ಕನ್ನಡ ಜಿಲ್ಲೆಯಾದಂತ್ಯ ಬೆಳಗಿನಿಂದ ಸುರಿಯುತ್ತಿರುವ ಮಳೆ
ಪಂಪ್‌ವೆಲ್ ನೆರೆ ಸಂಕಷ್ಟಕ್ಕೆ ಬ್ರೇಕ್? ಪಡೀಲ್ ಅಂಡರ್‌ಪಾಸ್‌ನಲ್ಲಿ ಪಂಪಿಂಗ್ !
ಮಂಗಳೂರು: ಮಳೆಗಾಲ ಬಂತೆಂದರೆ ಮಂಗಳೂರು ನಗರದ ಜನರನ್ನು ಹೆಚ್ಚು ಕಾಡುವ ಸಮಸ್ಯೆಗಳಲ್ಲಿ ಕೃತಕ ಪ್ರವಾಹವೂ ಒಂದು. ಅದರಲ್ಲೂ ಪಂಪ್‌ವೆಲ್ ಜಂಕ್ಷನ್ ಮತ್ತು ಪಡೀಲ್ ರೈಲ್ವೆ ಅಂಡರ್‌ಪಾಸ್ ಪ್ರದೇಶಗಳು ಪ್ರತಿವರ್ಷ ಮಳೆ ನೀರಿನಿಂದ ಜಲಾವೃತಗೊಂಡು ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತವೆ. ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ಈ ಎರಡು ಪ್ರದೇಶಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ.
ನಗರದ ಪ್ರಮುಖ ಸಂಚಾರ ಕೇಂದ್ರವಾಗಿರುವ ಪಂಪ್‌ವೆಲ್‌ನಲ್ಲಿ ಭಾರೀ ಮಳೆಯಾದಾಗ ಫ್ಲೈಓವರ್ ಕೆಳಭಾಗದ ರಸ್ತೆಯಲ್ಲಿ ನೀರು ನಿಂತು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ. ಕೆಲವೊಮ್ಮೆ ಹಲವು ಗಂಟೆಗಳ ಕಾಲ ನೀರು ನಿಂತು ವಾಹನಗಳು ನೀರಿನಲ್ಲೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಫ್ಲೈಓವರ್ ಅಡಿಯಲ್ಲಿರುವ ಸರ್ವಿಸ್ ರಸ್ತೆಯನ್ನು ಎತ್ತರಿಸುವ ಕಾಮಗಾರಿ ಆರಂಭಿಸಲಾಗಿದೆ. ಒಂದು ಬದಿಯ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ. ಉಳಿದ ಭಾಗದಲ್ಲೂ ಕಾಮಗಾರಿ ವೇಗವಾಗಿ ನಡೆಯುತ್ತಿದೆ.
ಇದರೊಂದಿಗೆ ಪಂಪ್‌ವೆಲ್‌ಗೆ ಹರಿದುಬರುವ ಮಳೆ ನೀರನ್ನು ಶೀಘ್ರವಾಗಿ ಹೊರಹಾಕಲು ಚರಂಡಿ ವ್ಯವಸ್ಥೆಯನ್ನು ವಿಸ್ತರಿಸುವ ಕಾರ್ಯವೂ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯ ರಸ್ತೆಯಿಂದ ಹರಿದುಬರುವ ನೀರು ಸುಲಭವಾಗಿ ಸಾಗುವಂತೆ ಕಾಲುವೆಯ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ. ಮಸೀದಿ ಸಮೀಪ ವಿವಿಧ ದಿಕ್ಕುಗಳಿಂದ ಬರುವ ನೀರಿಗೆ ಹೊಸ ನಿರ್ಗಮನ ಮಾರ್ಗಗಳನ್ನು ಕಲ್ಪಿಸುವ ಯೋಜನೆಯೂ ಜಾರಿಯಲ್ಲಿದ್ದು, ಈಗಾಗಲೇ ಎರಡು ಕಡೆ ಕಾಮಗಾರಿ ಪ್ರಾರಂಭವಾಗಿದೆ.
ಮತ್ತೊಂದೆಡೆ, ಪಡೀಲ್ ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆ ಬಂದಾಗ ನೀರು ನಿಂತು ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಸಮಸ್ಯೆಗೆ ಈ ಬಾರಿ ವಿಶೇಷ ಗಮನ ನೀಡಲಾಗಿದೆ. ಪಡೀಲ್–ಬಜಾಲ್ ಮಾರ್ಗವಾಗಿ ಉಳ್ಳಾಲ, ತಲಪಾಡಿ ಮತ್ತು ಕೇರಳ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಅಂಡರ್‌ಪಾಸ್ ಜಲಾವೃತಗೊಂಡರೆ ಪರ್ಯಾಯ ಮಾರ್ಗಗಳನ್ನೇ ಅವಲಂಬಿಸಬೇಕಾಗುತ್ತಿತ್ತು.
ಈ ಸಮಸ್ಯೆಗೆ ಪರಿಹಾರವಾಗಿ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ಅಂಡರ್‌ಪಾಸ್‌ನಲ್ಲಿ ಸಂಗ್ರಹವಾಗುವ ನೀರನ್ನು ತಕ್ಷಣವೇ ಹೊರಹಾಕಲು ಪಂಪಿಂಗ್ ವ್ಯವಸ್ಥೆ ಅಳವಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಅವರ ಪ್ರಕಾರ, ಪಂಪ್‌ವೆಲ್ ಪ್ರದೇಶದಲ್ಲಿ ನೀರು ನಿಲ್ಲುವ ಅವಧಿ ಮತ್ತು ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಲವು ಕಾಮಗಾರಿಗಳನ್ನು ಸಮನ್ವಯವಾಗಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಎತ್ತರಿಸುವುದು, ಚರಂಡಿ ವಿಸ್ತರಣೆ ಮತ್ತು ಹೆಚ್ಚುವರಿ ನೀರು ಹರಿವು ವ್ಯವಸ್ಥೆ ರೂಪಿಸುವ ಮೂಲಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ. ಜೊತೆಗೆ, ಪಡೀಲ್ ಅಂಡರ್‌ಪಾಸ್‌ನಲ್ಲಿ ಪಂಪಿಂಗ್ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಮಳೆಗಾಲದಲ್ಲಿ ಉಂಟಾಗುವ ತೊಂದರೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
Vayr ani Vayvaat |Removing human emotion from trading
ROSHAN DSOUZA - CRYPTO EDUCATOR | ALGO TRADING EXPERT | STOCK TRADER
Premiere on Friday 05th June, at 8 pm India, 6.30 pm UAE
ಮುಖ ಗುರುತು ಸಿಗದ ಹಾಗೆ ಹೊ*ಡೆದು ಹಾಕ್ತೀವಿ ಪುನೀತ್ ಕೆರೆಹಳ್ಳಿಗೆ ಜೀವ ಬೆದರಿಕೆ
ನಿನಗೆ ಹೆಚ್ಚು ದಿನ ಆಯಸ್ಸಿಲ್ಲ, 50 ಲಕ್ಷಕ್ಕೆ ಡೀಲ್ ಕೊಟ್ಟು ಮು*ಗಿಸ್ತೀವಿ..!
ಗೋಹ*ತ್ಯೆ* ವಿಚಾರದಲ್ಲಿ ಪುನೀತ್ ಕೆರೆಹಳ್ಳಿಗೆ ಓಪನ್ ಜೀವ ಬೆದರಿಕೆ.
ಫರಂಗಿಪೇಟೆ ಮೂಲದ ಮುಸ್ಲಿಂ ವ್ಯಕ್ತಿಯ ಸಂಭಾಷಣೆ.. ಆಡಿಯೋ ವೈರಲ್
ಗೋ ರಕ್ಷಕ ಪುನೀತ್ ಕೆರೆಹಳ್ಳಿ ಅವರಿಗೆ ಮೊಬೈಲ್ ಕರೆ ಮಾಡಿ ನೇರವಾಗಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವೈರಲ್ ಆಗಿರುವ ಆಡಿಯೋ ಸಂಭಾಷಣೆಯಲ್ಲಿ, ಅತ್ಯಂತ ಆಕ್ಷೇಪಾರ್ಹ ಹಾಗೂ ಹಿಂಸಾತ್ಮಕ ಪದಗಳನ್ನು ಬಳಸಿ ಧಮಕಿ ಹಾಕಿದ್ದಾನೆ, ದೊಡ್ಡ ಮೊತ್ತದ ಹಣ ಖರ್ಚು ಮಾಡಿಯಾದರೂ ಮುಗಿಸುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲದೆ, ಧೈರ್ಯವಿದ್ದರೆ ಮಂಗಳೂರಿಗೆ ಬರುವಂತೆ ಮುಖಾಮುಖಿ ಸವಾಲು ಹಾಕಿದ್ದಾನೆ.
Vayr ani Vayvaat |The reality of investing in Bitcoin Promo 1
ROSHAN DSOUZA - CRYPTO EDUCATOR | ALGO TRADING EXPERT | STOCK TRADER
Premiere on Friday 05th June, at 8 pm India, 6.30 pm UAE
Click here to claim your Sponsored Listing.
Category
Contact the business
Telephone
Address
Mangalore