Anasyua. JS.

Anasyua. JS.

Share

Contact information, map and directions, contact form, opening hours, services, ratings, photos, videos and announcements from Anasyua. JS., Writer, Koppal.

ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಎರಡನೇ ದಿನದ ಧರ್ಮ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ 06/01/2026

https://www.youtube.com/live/bd5zX3KsyEQ?si=KE-ilw1YjRh2PRRT

ಜಾತ್ರೆ ೨ನೇ ದಿನದ ನೇರ ಪ್ರಸಾರ

ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಎರಡನೇ ದಿನದ ಧರ್ಮ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಎರಡನೇ ದಿನದ ಧರ್ಮ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳುಇಂತಹ ಕಾಯಕ್ರ.....

06/11/2025
06/11/2025

ನನ್ನೆಜಮಾನರಿಗೆ ಸಮರ್ಪಣೆ ಈ ಹಾಡು.

01/11/2025

*ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು*

ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು (ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.

ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪ ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು.

ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.

೧೯೫೬ ರ ನವೆಂಬರ್ ೧ ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ *ಉತ್ತರ* *ಕರ್ನಾಟಕ,ಮಲೆನಾಡು* ಮತ್ತು *ಹಳೆಯ ಮೈಸೂರು* ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.

ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಮುಂಚಿನ ರಾಜ್ಯದ ಹೆಸರು ಇರಲೆಂದು *"ಮೈಸೂರು"* ಹೆಸರನ್ನು ಉಳಿಸಿಕೊಂಡರು. ಆದರೆ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ "ಕರ್ನಾಟಕ"* ಎಂದು ಬದಲಾಯಿಸಲಾಯಿತು.

ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರಲ್ಲಿ ಅನಕೃ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ ಮುಂತಾದವರು ಪ್ರಮುಖರು.

*ಕರ್ನಾಟಕದ ಏಕೀಕರಣ*

ಭಾರತವು ಸ್ವತಂತ್ರವಾದ ಮತ್ತು ದೇಶ ವಿಭಜನೆಯಾದ ಬಳಿಕ ಭಾಷಾವಾರು ಮತ್ತು ಇತರ ಮಾನದಂಡಗಳನ್ನು ಆಧರಿಸಿ ರಾಜ್ಯಗಳನ್ನು ರಚಿಸಲು ಪುನರ್ವಿಂಗಡಣೆಯ ಗಡಿಗಳನ್ನು ಗುರುತಿಸಲಾಯಿತು ಸ್ವಾತಂತ್ರ್ಯದ ನಂತರ, ಒಡೆಯರ್ ಅವರು ಜನರ ಮನದಿಂಗಿತವನ್ನು ಗಮನಿಸಿ ಅವರ ಅಪೇಕ್ಷೆ ಮನ್ನಿಸಿ ಭಾರತದ ಭಾಗವಾಗಲು ಸಮ್ಮತಿಸಿದರು. 1950 ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು, ಮಹಾರಾಜರು 1975 ರ ವರೆಗೆ ಅದರ ರಾಜ ಪ್ರಮುಖ, ಅಥವಾ ರಾಜ್ಯಪಾಲರಾದರು. ಏಕೀಕರಣ ಚಳುವಳಿ 19ನೆಯ ಶತಮಾನದ ಎರಡನೇ ಭಾಗದಲ್ಲಿ ಆರಂಭವಾಗಿ, 1956 ರಲ್ಲಿ ರಾಜ್ಯ ಪುನರ್ ಸಂಘಟನೆ ಕಾಯಿದೆಯೊಂದಿಗೆ ಚಳುವಳಿ ಮುಕ್ತಾಯವಾಯಿತು. ಇದರಿಂದ ಕೂರ್ಗ್ / ಕೊಡಗು, ಮದ್ರಾಸ್`ಪ್ರಾಂತ್ಯ , ಹೈದರಾಬಾದ್, ಹಾಗೂ ಮುಂಬಯಿ ರಾಜ್ಯದ ಕನ್ನಡ ಭಾಷೆಯ ಜನರು ಹೆಚ್ಚು ಇರುವ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು.

ಆಗಿನ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರ ಕಾಲದಲ್ಲಿ ೧ ನವೆಂಬರ್, ೧೯೭೩ ರಂದು, ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಹೊಸ ಮೈಸೂರು ರಾಜ್ಯವು(ನಂತರ ವಿಶಾಲ ಮೈಸೂರು-ಆಮೇಲೆ ಈಗಿನ ಕರ್ನಾಟಕ) ೧ ನವೆಂಬರ್.೧೯೫೬ ರಲ್ಲಿ ರಚನೆಯಾಯಿತು ಅಂದಿನಿಂದ ೧ ನವೆಂಬರ್ ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.

ಕನ್ನಡ ಭಾಷೆಯ ಕೆಲವು ಪ್ರದೇಶಗಳು ಸೇರ್ಪಡೆ ಆಗದ ಕಾರಣ ಕನ್ನಡಿಗರು ನಿರಾಶೆ ಹೊಂದಿದ್ದರೂ, ಸಂಸತ್ತಿನಲ್ಲಿ ಎಸ್ಆರ್ಸಿ (SRC)ರಾಜ್ಯ ಪುನರ್ವಿಂಗಡಣಾ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಲು ಒಪ್ಪಿದರು. ರಾಜರ ಆಡಳಿತದಲ್ಲಿದ್ದ ಮೈಸೂರು ರಾಜ್ಯವು ಸಕಾರಾತ್ಮಕವಾಗಿ, ಪ್ರತಿಕ್ರಿಯಿಸಿತು .ಕರ್ನಾಟಕಕ್ಕೆ ಸೇರದೆ ಕೈಬಿಟ್ಟ ಹೆಚ್ಚು ಕನ್ನಡಿಗರಿರುವ ಪ್ರದೇಶಗಳ ಪೈಕಿ ಅತ್ಯಂತ ಗಮನಾರ್ಹವಾದ ಪ್ರದೇಶ ಕಾಸರಗೋಡು. ಇದು ಏಕೀಕರಣ ಚಳವಳಿಯನ್ನು ಪ್ರಾರಂಭಿಸಿದ ಕೇಂದ್ರಗಳಲ್ಲಿ ಒಂದಾಗಿದೆ. ಹೀಗಾಗಿ ಕನ್ನಡ ಮಾತನಾಡುವ ಜನಸಂಖ್ಯೆಯುಳ್ಳ ಪ್ರದೇಶಗಳಲ್ಲಿ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಕನ್ನಡಿಗರು ತಳಮಳ ಗೊಂಡಿದ್ದಾರೆ; ಹೋರಾಟ ಮುಂದುವರೆಸಿದ್ದಾರೆ.

ಕರ್ನಾಟಕ ರಾಜ್ಯವು ತನ್ನ ರಾಜಧಾನಿಯಾಗಿ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿತು, ಮತ್ತು ಕನ್ನಡಕ್ಕೆ ಆಡಳಿತ ಭಾಷೆಯ ಸ್ಥಾನಮಾನವನ್ನು ನೀಡಿತು. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಮೇಲ್ವಿಚಾರಣೆಯಲ್ಲಿ ವಿಧಾನಸೌಧದ ನಿರ್ಮಾಣವಾಗಿ, ಅದು ರಾಜ್ಯದ ಶಾಸನಸಭೆಯ (ಸಂಸತ್`ಭವನ) ಸದನವಾಯಿತು. ಹಿಂದಿನ ಸಚಿವಾಲಯವಾಗಿದ್ದ *‘ಅಠಾರಾ ಕಛೇರಿ'* ಯನ್ನು (ಸರ್ಕಾರದ ಆಡಳಿತ ಕಛೇರಿ) ರಾಜ್ಯದ ಹೈಕೋರ್ಟ್ ಮಾಡಲಾಯಿತು.

*ಸ್ವಾತಂತ್ರಾನಂತರದ ಕರ್ನಾಟಕದ ಇತಿಹಾಸ*

ಶ್ರೀ ಕೆ.ಚಂಗಲರಾಯ ರೆಡ್ಡಿ (ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ)25ನೇ ಅಕ್ಟೋಬರ್ 1947 ರಂದು ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ಮೈಸೂರು ಮಹಾರಾಜ *ಎಚ್.ಎಚ್.ಶ್ರೀ ಜಯಚಾಮರಾಜೇಂದ್ರ ಒಡೆಯರ್* ರಾಜಪ್ರಮುಖರಾದರು. ನಂತರ ರಾಜ್ಯದ ರಾಜ್ಯಪಾಲರಾದರು. ರೆಡ್ಡಿಯವರ ನಂತರ ದಿ 30ನೇ ಮಾರ್ಚ್ 1952 ರಿಂದ ಕಾಂಗ್ರೆಸ್ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾದರು.

ಮೈಸೂರು ಮತ್ತು ಕೊಡಗು ರಾಜ್ಯಗಳು, ಮುಂಬಯಿ ಮತ್ತು ಹೈದರಾಬಾದ್,ನ ಮತ್ತು ಮದ್ರಾಸ್ ನ ಹಳೆಯ ರಾಜ್ಯಗಳ ಕನ್ನಡ ಮಾತನಾಡುವ ಜಿಲ್ಲೆಗಳು ಕರ್ನಾಟಕದಲ್ಲಿ ವಿಲೀನಗೊಂಡವು. *ನಂತರ, 1956 ರಲ್ಲಿ ತನ್ನ ಪ್ರಸಕ್ತ ರೂಪವನ್ನು ತೆಗೆದುಕೊಂಡಿತು.

ಆಗ ಮೈಸೂರು ರಾಜ್ಯವು 10 ಜಿಲ್ಲೆಗಳನ್ನು ಹೊಂದಿತ್ತು ಅವು : ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ.
ಬಳ್ಳಾರಿಯು 1953 ರಲ್ಲಿ ಈಗಿನ ಕರ್ನಾಟಕಕ್ಕೆ ಸೇರಿದವು. (ಇವು ಎಲ್ಲಾ ಕರ್ನಾಟಕದಲ್ಲಿ ಸೇರಿದವು.)

ಹೊಸ ಆಂಧ್ರ ರಾಜ್ಯವು ಮದ್ರಾಸ್` ನ ಉತ್ತರ ಜಿಲ್ಲೆಗಳಲ್ಲಿ ಸೃಷ್ಟಿಯಾಯಿತು. ಆಗ ಮೈಸೂರು ರಾಜ್ಯಕ್ಕೆ ಮದ್ರಾಸ್ ಪ್ರಾಂತ್ಯದಿಂದ ವರ್ಗಾಯಿಸಿದ. ಕೊಡಗು ಜಿಲ್ಲಾ(ಕೇಂದ್ರಾಡಳಿತ), ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಮದ್ರಾಸ್ ರಾಜ್ಯದ ಉತ್ತರ ಕನ್ನಡ ಧಾರವಾಡ, ಬೆಳಗಾವಿ ಜಿಲ್ಲೆ, ಮತ್ತು ಮುಂಬಯಿ ಪ್ರಾಂತ್ಯದ ಬಿಜಾಪುರ ಜಿಲ್ಲೆ; ಮತ್ತು ಹೈದರಾಬಾದ್ ಪ್ರಾಂತ್ಯದಿಂದ ಬೀದರ್ ಜಿಲ್ಲೆ, ಗುಲ್ಬರ್ಗಾ ಜಿಲ್ಲೆ, ಮತ್ತು ರಾಯಚೂರು ಜಿಲ್ಲೆಗಳನ್ನು ಕರ್ನಾಟಕಕ್ಕೆ ವರ್ಗಾಯಿಸಲಾಯಿತು . 1989 ರಲ್ಲಿ ಗ್ರಾಮಾಂತರ ಪ್ರದೇಶ ಬೆಂಗಳೂರಿನಿಂದ ಬೇರ್ಪಟ್ಟು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಯಿತು. 1997 ರಲ್ಲಿ ಬಾಗಲಕೋಟೆ ಜಿಲ್ಲೆಯ ವಿಜಯಪುರ/ಬಿಜಾಪುರದಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಯಿತು. ಮೈಸೂರು ಜಿಲ್ಲೆ ಒಡೆದು ಚಾಮರಾಜನಗರ ಜಿಲ್ಲೆ ಆಯಿತು. ಧಾರವಾಡ ಜಿಲ್ಲೆ ಒಡೆದು ಗದಗ ಜಿಲ್ಲೆ ಹುಟ್ಟಿತು. ಮತ್ತೆ ಧಾರವಾಡ ಜಿಲ್ಲೆ ಒಡೆದು ಹಾವೇರಿ ಜಿಲ್ಲೆ ಆಯಿತು. ರಾಯಚೂರು ಜಿಲ್ಲೆ ಒಡೆದು ಕೊಪ್ಪಳ ಜಿಲ್ಲೆ ಆಯಿತು. ದಕ್ಷಿಣ ಕನ್ನಡ ಬೇರ್ಪಟ್ಟು ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಆಯಿತು.
ದಾವಣಗೆರೆ ಜಿಲ್ಲೆಯನ್ನು ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಶಿವಮೊಗ್ಗ ಜಿಲ್ಲೆಗಳ ಭಾಗಗಳಿಂದ ರಚಿಸಲಾಗಿದೆ. 2008 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಇಬ್ಭಾಗಿಸಿ ರಾಮನಗರ ಎಂಬ ಹೊಸ ಜಿಲ್ಲೆಯ ರಚನೆಯಾಯಿತು. ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು, ಹಿಂದಿನ ಕೋಲಾರ ಜಿಲ್ಲೆಯನ್ನು ಒಡೆದು ಮಾಡಲಾಯಿತು.ಹಾಗೆಯೇ ಬಳ್ಳಾರಿ ಜಿಲ್ಲೆಯನ್ನು ಒಡೆದು ವಿಜಯನಗರ ಜಿಲ್ಲೆಯನ್ನು ರಚಿಸಲಾಗಿದೆ. ಇದು ಇಂದಿನ (೨೦೨೧) ಕರ್ನಾಟಕ. ಈಗ ಕರ್ನಾಟಕದಲ್ಲಿ(೨೦೨೧) ೩೧ ಜಿಲ್ಲೆಗಳಿವೆ.

*ಸ್ವಾತಂತ್ರ್ಯ ಪೂರ್ವ ಕರ್ನಾಟಕದ ಸಂಕ್ಷಿಪ್ತ ಇತಿಹಾಸ*

ಹೊಯ್ಸಳರು ಮತ್ತು ಸೇವುಣರ ನಡುವಿನ ರಾಜಕೀಯ ಸೆಣಸಾಟದಲ್ಲಿ ಕರ್ನಾಟಕವು ಎರಡು ಭಾಗವಾಯಿತು. ತುಂಗಭದ್ರಾ ನದಿಯ ಉತ್ತರಕ್ಕೆ ಸೇವುಣರೂ, ದಕ್ಷಿಣಕ್ಕೆ ಹೊಯ್ಸಳರೂ ಆಳಿದರು. ಇದು ನಡೆದದ್ದು ೧೩ ನೆಯ ಶತಮಾನದ ಆರಂಭದಲ್ಲಿ; ಆಗ ಬೇರೆಯಾದ ಕನ್ನಡಿಗರು ಆಡಳಿತಾತ್ಮಕವಾಗಿ ಒಂದಾದದ್ದು ೧೯೫೬ ರಲ್ಲಿ.

ಅಂದರೆ ಸುಮಾರು ೭೫೦ ವರ್ಷಗಳ ಕಾಲ ಕನ್ನಡಿಗರೇ ಅಧಿಕವಾಗಿದ್ದ ಭಾಗಗಳನ್ನು ಆಳಿದವರು ಕನ್ನಡೇತರರು. ಆಳುವ ವರ್ಗವು ಬಯಸುವ ಭಾಷೆಯನ್ನು ಆಡಳಿತದಲ್ಲಿ ಬಳಸುವುದು ವಾಡಿಕೆ. ಯಾವುದೇ ಭಾಷೆಯ ಬಳಕೆ ಕಡಿಮೆಯಾದರೆ, ಆ ಭಾಷೆಯ ಅವನತಿ ಆರಂಭವಾಗುತ್ತದೆ.

ಭಾಷೆಯ ಅವನತಿಯೊಡನೆ ಆ ಭಾಷಿಕರ ಸಂಸ್ಕೃತಿಯೂ ಅನ್ಯಾಕ್ರಾಂತವಾಗುತ್ತದೆ ಮತ್ತು ಕ್ರಮೇಣ ತನ್ನ ಸ್ವರೂಪದಲ್ಲಿ ಗುರುತಿಸಲಾಗದಷ್ಟು ಬದಲಾವಣೆಗಳನ್ನು ಪಡೆಯುತ್ತದೆ.

ಕರ್ನಾಟಕದ ಗಡಿರೇಖೆಯು ಎಂದೂ ಸ್ಥಿರವಾಗಿರಲಿಲ್ಲ.

ಕದಂಬ-ಗಂಗ-ಬಾದಾಮಿ ಚಾಳುಕ್ಯ ವಂಶಗಳ ಆಳ್ವಿಕೆಯ ಸಂದರ್ಭದಲ್ಲಿ ಗೋದಾವರಿ ನದಿಯನ್ನು ಉತ್ತರ ಗಡಿಯಾಗಿಯೂ, ಕಾವೇರಿ ನದಿಯು ಸಮುದ್ರವನ್ನು ಸೇರುವ ಭಾಗದವರೆಗಿನ ಭಾಗವನ್ನು ದಕ್ಷಿಣ ಗಡಿಯಾಗಿಯೂ ಹೊಂದಿದ್ದ ಕರ್ನಾಟಕವು ಬಾದಾಮಿ ಚಾಳುಕ್ಯ ವಂಶದ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ನರ್ಮದೆಯವರೆಗೆ ತನ್ನ ಆಡಳಿತವನ್ನು ವಿಸ್ತರಿಸಿಕೊಳ್ಳುವ ಅವಕಾಶಗಳಿದ್ದರೂ ಹಾಗೆ ಮಾಡಲಿಲ್ಲ.

ಶ್ರೀವಿಜಯನು, ತನ್ನ ‘ಕವಿರಾಜಮಾರ್ಗ’ ದಲ್ಲಿ `ಕಾವೇರಿಯಿಂದಮಾಗೋದಾವರಿವರಮಿರ್ದ’ ನಾಡು ಕನ್ನಡ ನಾಡು ಎಂದು ವರ್ಣಿಸಿದ್ದಾನೆ. ಕಲ್ಯಾಣ ಚಾಳುಕ್ಯರ ಆಳ್ವಿಕೆಯ ಕಾಲಕ್ಕೆ ಈಗಿನ ಮಹಾರಾಷ್ಟ್ರದ ದಕ್ಷಿಣ ಭಾಗಗಳು ಮತ್ತು ಆಂಧ್ರದ ಪಶ್ಚಿಮ ಭಾಗಗಳು ಆಗಿನ ಕರ್ನಾಟಕದ ಅವಿಭಾಜ್ಯ ಭಾಗಗಳಾಗಿದ್ದವು.

ಈಗಾಗಲೇ ತಿಳಿಸಿರುವಂತೆ ಹೊಯ್ಸಳರು ಮತ್ತು ಸೇವುಣರ ಕಾಲದಲ್ಲಿ ಒಡೆದುಕೊಂಡ ಕರ್ನಾಟಕವು ಒಂದಾಗಲು ಹಲವು ಶತಮಾನಗಳು ಬೇಕಾಯಿತು; ಹೋರಾಟವೂ ಅನಿವಾರ್ಯವಾಯಿತು. ಇದು ವಿಪರ್ಯಾಸ ಎನಿಸಿದರೂ, ಮರೆಮಾಚಲಾಗದ ಸತ್ಯ. ಹೊಯ್ಸಳರು ಮತ್ತು ಸೇವುಣ ರ ಅನಂತರ ಆಳಿದ ವಿಜಯನಗರದ ಅರಸರ ಕಾಲದಲ್ಲೂ ಕರ್ನಾಟಕವು ತನ್ನ ಹಿಂದಿನ ಸ್ವರೂಪವನ್ನು ಪಡೆಯಲಿಲ್ಲ.

ದಕ್ಷಿಣ ಭಾರತದ ಬಹುತೇಕ ಭಾಗವನ್ನು ವಿಜಯನಗರದ ಅರಸರು ಆಳಿದರು; ಆದರೆ ಆ ಮೊದಲು ಕರ್ನಾಟಕದ ಭಾಗವಾಗಿದ್ದ ಮತ್ತು ಈಗ ಕರ್ನಾಟಕಕ್ಕೆ ಸೇರಿರುವ ರಾಯಚೂರು, ಗುಲಬರ್ಗ ಮತ್ತು ಬೀದರ್ ಜಿಲ್ಲೆಗಳು ವಿಜಯನಗರದ ವ್ಯಾಪ್ತಿಗೆ ಸೇರಿರಲಿಲ್ಲ. ಅವೆಲ್ಲವೂ ಆದಿಲ್ ಷಾಹಿಗಳ ವಶದಲ್ಲಿದ್ದವು. ಮೈಸೂರು ರಾಜ್ಯವನ್ನು ವಿಸ್ತರಿಸಲು ಹೈದರ್ ಮತ್ತು ಟಿಪ್ಪು ಪ್ರಯತ್ನಿಸಿದರು.

ಟಿಪ್ಪುವು ತುಂಗಭದ್ರಾ ನದಿಯ ಆಚೆಯ ಕೆಲವು ಪ್ರದೇಶಗಳನ್ನು ಗೆದ್ದನಾದರೂ, ೧೭೯೧ ರಲ್ಲಿ ಪೇಶ್ವೆಗಳೊಡನೆ ಆದ ಒಪ್ಪಂದದ ಪ್ರಕಾರ, ವರದಾ ನದಿಯ ಉತ್ತರ ಭಾಗವನ್ನು ಪೇಶ್ವೆಗಳಿಗೂ, ಕೊಡಗು ಮತ್ತು ಮಲಬಾರ್ ಪ್ರಾಂತಗಳನ್ನು ಬ್ರಿಟಿಷರಿಗೂ ನೀಡಬೇಕಾಯಿತು.

೧೭೮೭ರಲ್ಲಿ ತುಂಗಭದ್ರೆಯು ತನ್ನ ರಾಜ್ಯದ ಉತ್ತರ ಗಡಿ ಎಂದು ಒಪ್ಪಿಕೊಂಡಿದ್ದ ಟಿಪ್ಪುವು, ೧೭೯೯ ರಲ್ಲಿ ಮರಣ ಹೊಂದಿದ. ಅನಂತರ ಅಂದರೆ ೪ ನೆಯ ಮೈಸೂರು ಯುದ್ಧದ ಅನಂತರ ಬ್ರಿಟಿಷರು ಮತ್ತು ಹೈದರಾಬಾದ್ನ ನಿಜಾಮನ ನಡುವೆ ಆಗಿದ್ದ ಒಪ್ಪಂದದ ಪ್ರಕಾರ ಮೈಸೂರು ಸಂಸ್ಥಾನವು ಮಾತ್ರ ಮೈಸೂರಿನ ಒಡೆಯರಿಗೆ ಉಳಿಯಿತು.

ಬೆಳಗಾಂವಿ, ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಬ್ರಿಟಿಷರ ಮುಂಬಯಿ ಆಧಿಪತ್ಯಕ್ಕೂ, ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು ಬ್ರಿಟಿಷರ ಮದರಾಸಿನ ಆಧಿಪತ್ಯಕ್ಕೂ, ಬೀದರ್, ಗುಲಬರ್ಗ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್ ನಿಜಾಮನ ಆಳ್ವಿಕೆಗೂ ಸೇರಿದವು. ಕೊಡಗು ಜಿಲ್ಲೆಯು ಬ್ರಿಟಿಷರ ಒಂದು ಅಧೀನ ರಾಜ್ಯವಾಗಿ ಉಳಿಯಿತು.

ಕೆಲವು ಪ್ರದೇಶಗಳು ಸ್ಥಳೀಯ ಮರಾಠೀ ಸಂಸ್ಥಾನಿಕರ ವಶದಲ್ಲಿ ಉಳಿದವು. ಹೀಗೆ ರಾಜಕೀಯವಾಗಿ ಒಡೆದುಕೊಂಡು, ಭಿನ್ನ-ಭಿನ್ನ ಆಡಳಿತ ವ್ಯಾಪ್ತಿಗೆ ಸೇರಿದ ಕನ್ನಡ ಭಾಷಿಕರ ಪ್ರಾಂತಗಳಲ್ಲಿ, ಆಳುವ ವರ್ಗದವರ ಮರ್ಜಿಯಂತೆ, ಆಡಳಿತದ ಭಾಷೆಯ ಬಳಕೆ ಆಯಿತು. ಈಗಿನಂತೆಯೇ, ಹಿಂದೆಯೂ ಜನರ ಭಾಷೆಯ ಬದಲು, ಆಳುವವರ ಅಥವಾ ಆಳುವ ವರ್ಗದ ಅನುಕೂಲಕ್ಕಾಗುವ ಭಾಷೆಯು ಆಡಳಿತದಲ್ಲಿ ಬಳಕೆ ಆಯಿತು.

ಕೇವಲ ಕೆಲವರೇ ಇದ್ದ ಆಳುವವರು, ಬಹು ಸಂಖ್ಯಾತ ಆಳಿಸಿಕೊಳ್ಳುವವರ ಭಾಷೆಯನ್ನು ಕಲಿಯಲಿಲ್ಲ; ಆಡಳಿತದಲ್ಲಿ ಬಳಸಿಕೊಳ್ಳಲಿಲ್ಲ. ಬದಲಿಗೆ ಬಹು ಸಂಖ್ಯಾತ ಆಳಿಸಿಕೊಳ್ಳುವವರು ಅಲ್ಪ ಸಂಖ್ಯಾತ ಆಳುವವರ ಭಾಷೆಯನ್ನು ಕಲಿತರು. ಇದಕ್ಕೆ ಕಾರಣ ಆಳುವವರ ಯಾಜಮಾನ್ಯ ಪ್ರವೃತ್ತಿ ಮತ್ತು ಆಳಿಸಿಕೊಳ್ಳುವವರ ಗುಲಾಮ ಪ್ರವೃತ್ತಿ.

ತಮಗೆ ಅರ್ಥವಾಗದೆ ಇದ್ದರೂ ಆಳುವವರ ಭಾಷೆಯನ್ನು ಒಪ್ಪಿಕೊಂಡ ಜನ ಕ್ರಮೇಣ

ಆಳುವವರ ಭಾಷೆಯನ್ನು ಬಲವಂತವಾಗಿಯಾದರೂ ಕಲಿತರು. ಆಳುವ ಜನ ತಮ್ಮ ಅನುಕೂಲಕ್ಕೆ ಆಡಳಿತ ನಡೆಸುವುದು ಸಹಜ. ಬ್ರಿಟಿಷ ರಾಗಲೀ, ಹೈದರಾಬಾದ್ ನಿಜಾಮನಾಗಲೀ, ಮರಾಠೀ ದೇಸಾಯಿಗಳಾಗಲೀ ತಮಗೆ ಮಾತ್ರ ಅರ್ಥವಾಗುವ ಭಾಷೆಯಲ್ಲಿ ಆಡಳಿತ ನಡೆಸಿದರು.

ತಾವು ಹೇಳಿದ್ದು ತಮಗೆ ಅರ್ಥವಾಗಬೇಕು ಎಂಬ ಅವರ ನಿರೀಕ್ಷೆಯಂತೂ ಸರಿ; ಆದರೆ ತಮ್ಮ ಮಾತು ಯಾರಿಗೆ ತಲುಪಬೇಕೋ ಅವರಿಗೆ ತಲುಪುತ್ತಿದೆಯೇ ಎಂದು ತಿಳಿಯುವ ಪ್ರಯತ್ನವನ್ನೂ ಆಳುವ ಜನ ಮಾಡಿದಂತೆ ತೋರುವುದಿಲ್ಲ. ಈ ಮಾತು ಎಲ್ಲ ಕಾಲಕ್ಕೆ ಮತ್ತು ಆಳಿದ ಎಲ್ಲರಿಗೂ ಅನ್ವಯಿಸುವುದಿಲ್ಲ.

ಬ್ರಿಟಿಷರಲ್ಲಿ ಕೆಲವು ಅಧಿಕಾರಿಗಳು ಭಾರತಕ್ಕೆ ಬಂದ ಮೇಲೆ ಇಲ್ಲಿನ ಸ್ಥಳೀಯ ಭಾಷೆಗಳನ್ನು ಕಲಿತು, ಆ ಭಾಷೆಯಲ್ಲೇ ಮಹತ್ವದ ಸಾಧನೆಗಳನ್ನು ಮಾಡಿದರು. ಆ ನಿಟ್ಟಿನಲ್ಲಿ ಯೂರೋಪಿಯನ್ ವಿದ್ವಾಂಸರ ಕಾರ್ಯವಿಧಾನವನ್ನು ಮೆಚ್ಚಲೇಬೇಕಾಗುತ್ತದೆ. ಕರ್ನಾಟಕದ ಉತ್ತರ ಭಾಗದಲ್ಲಿಯೂ ೧೮ ನೆಯ ಶತಮಾನದ ಹೊತ್ತಿಗೆ ಮರಾಠೀ ಭಾಷೆಯ ಪ್ರಭಾವ ಅಧಿಕವಾಗಿತ್ತು. ೧೮೧೭ ರಲ್ಲಿ ಸೋತ ಬಾಜೀರಾಯನಿಂದ ಬ್ರಿಟಿಷರು ಪೇಶವೆಗಳ ಆಳ್ವಿಕೆಗೆ ಸೇರಿದ್ದ ಎಲ್ಲಾ ಭಾಗಗಳನ್ನೂ ವಶಪಡಿಸಿಕೊಂಡರು.

ಆಡಳಿತಾತ್ಮಕ ಕಾರಣಗಳಿಂದ ೧೮೨೬ ರಲ್ಲಿ ಧಾರವಾಡ ಜಿಲ್ಲೆಯನ್ನು ಮದ್ರಾಸ್ ಪ್ರಾಂತಕ್ಕೆ ಸೇರಿಸಲು ಆಗ ಬಳ್ಳಾರಿಯಲ್ಲಿ ಕಲೆಕ್ಟರ್ ಆಗಿದ್ದ ಸರ್ ಥಾಮಸ್ ಮನ್ರೋ ಶಿಫಾರಸು ಮಾಡಿ, ಮುಂಬಯಿ ಕರ್ನಾಟಕ ಪ್ರಾಂತವನ್ನು ‘ದಕ್ಷಿಣ ಮರಾಠ ಪ್ರಾಂತ್ಯ’ ಎಂದು ಕರೆದು ತಪ್ಪು ಮಾಡಿರುವೆನೆಂದು ಒಪ್ಪಿಕೊಂಡಿದ್ದ.

ಶಾಶ್ವತ ಏಕೀಕರಣವನ್ನು ಸಾಧಿಸುವುದರಿಂದ ಒಟ್ಟು ಕನ್ನಡ ಜನರಿಗೆ ಹಿತ ಆಗುತ್ತದೆ ಎಂಬುದು ಮನ್ರೋನ ಆಸೆಯಾಗಿತ್ತು. ದಕ್ಷಿಣ ಮರಾಠ ಪ್ರಾಂತ್ಯದ ಆ ಭಾಗಗಳಲ್ಲಿ ಆಳುತ್ತಿದ್ದ ಮರಾಠಿ ದೇಸಾಯರು ಮತ್ತು ಜಹಗೀರುದಾರರು ಆಡಳಿತದಲ್ಲಿ ಇಡಿಯಾಗಿ ಮರಾಠಿ ಭಾಷೆಯನ್ನು ಜಾರಿಗೆ ತಂದಿದ್ದರು. ಆದ್ದರಿಂದ ಜನತೆಯು ಅನಿವಾರ್ಯವಾಗಿ ಮರಾಠಿ ಕಲಿಯಬೇಕಾಯಿತು.

ಕನ್ನಡವು ಕೇವಲ ಮನೆಮಾತಾಗಿ ಉಳಿಯಿತು. ಆಡಳಿತಕ್ಕೆ ಪೂರ್ಣವಾಗಿ ಬಳಕೆ ಆಗುತ್ತಿದ್ದ ಮರಾಠೀ ಭಾಷೆಗೆ ಶಿಕ್ಷಣದಲ್ಲೂ ಆದ್ಯತೆ ದೊರೆಯಿತು. ಈ ವಿಪರ್ಯಾಸವನ್ನು ಸರಿಪಡಿಸಲು ಸರ್ ವಾಲ್ಟರ್ ಎಲಿಯಟ್ ಪ್ರಯತ್ನಿಸಿದ. ೧೮೨೬ ರಲ್ಲಿ ಮುಂಬಯಿ ಆಧಿಪತ್ಯದ ಸರ್ಕಾರವು ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಒಂದೊಂದು ಮರಾಠೀ ಶಾಲೆಯನ್ನು ಆರಂಭಿಸಿತು.

ಆಡಳಿತದಲ್ಲಿ ಮರಾಠಿಯ ಪ್ರಾಬಲ್ಯವೇ ಹೆಚ್ಚಾಗಿದ್ದುದರಿಂದ ಸರ್ಕಾರದೊಂದಿಗಿನ ಸಂಪರ್ಕಕ್ಕೆ ಅದೇ ಸುಲಭ ಭಾಷೆ ಎಂಬ ಅಭಿಪ್ರಾಯ ಅಧಿಕಾರಿಗಳಿಗಿದ್ದಂತೆ ತೋರುತ್ತದೆ. ಆದರೆ ಸರ್ ವಾಲ್ಟರ್ ಎಲಿಯಟ್ ಆಲೋಚಿಸಿದ ರೀತಿಯೇ ಬೇರೆ ಆಗಿತ್ತು. ‘ಇಲ್ಲಿಯ ಬಹುತೇಕ ಜನರ ಭಾಷೆ ಕನ್ನಡ ಆಗಿರುವುದರಿಂದ ಕನ್ನಡವೇ ಆಡಳಿತ ಭಾಷೆಯಾಗುವುದು ಸೂಕ್ತ’ ಎಂಬ ಅಭಿಪ್ರಾಯದಿಂದ ಧಾರವಾಡದಲ್ಲಿ ಕನ್ನಡ ಶಾಲೆಯೊಂದನ್ನು ಆರಂಭಿಸಲು ತಾನೇ ೧೮೩೦ ರಲ್ಲಿ ಅರ್ಜಿ ಸಲ್ಲಿಸಿದ.

ಆದರೆ ಸರ್ಕಾರ ಅನುಮತಿ ನೀಡಲಿಲ್ಲ. ೧೮೩೩ ರವರೆಗೆ, ಮೂರು ವರ್ಷಗಳ ಕಾಲ ಎಲಿಯಟ್ ಸ್ವಂತ ಖರ್ಚಿನಲ್ಲೇ ಶಾಲೆಯನ್ನು ನಡೆಸಿದ. ಸರ್ ವಾಲ್ಟರ್ ಎಲಿಯಟ್ ಆರಂಭಿಸಿದ ಕೆಲಸವನ್ನು, ಎಂಜಿನಿಯರಿಂಗ್ ಶಿಣ ಪಡೆದರೂ ಶಿಕ್ಷÀಣ ಇಲಾಖೆಯಲ್ಲಿ ದುಡಿದು ಕನ್ನಡದ ‘ಡೆಪ್ಯುಟಿ’ ಎನಿಸಿಕೊಂಡು ಕನ್ನಡದ ರಕ್ಷಣೆ ಮಾಡಿದ ಡೆಪ್ಯುಟಿ ಚೆನ್ನಬಸಪ್ಪ ಮುಂದುವರಿಸಿದರು.

ಅವರಿಗೆ ಆಗಿನ ವಿದ್ಯಾ ಇಲಾಖೆಯ ದಕ್ಷಿಣ ವಿಭಾಗದ ಇನ್ಸ್ಪೆಕ್ಟರ್ ಆಗಿದ್ದ ರಸೆಲ್ ಪ್ರೋತ್ಸಾಹ ನೀಡಿದರು. ಡೆಪ್ಯುಟಿ ಚೆನ್ನಬಸಪ್ಪನವರು ಬೆಳಗಾವಿಯ ನಾರ್ಮಲ್ ಸ್ಕೂಲಿನ ಪ್ರಿನ್ಸಿಪಾಲರಾಗಿದ್ದಾಗ ‘ಮಠಪತ್ರಿಕೆ’ ಎಂಬ ಕನ್ನಡ ಪತ್ರಿಕೆಯನ್ನೂ ಆರಂಭಿಸಿದರು.

೧೮೩೭ ರಲ್ಲಿ ಬೆಳಗಾಂವಿಯ ಜಿಲ್ಲಾಧಿಕಾರಿಯಾಗಿದ್ದ ಜಾನ್.ಎ.ಡನ್ಲಪ್ ಅವರು ಧಾರವಾಡದ ಸಂದರ್ಶಕ ನ್ಯಾಯಾಂಗ ಕಮೀಷನರ್ ಅವರಿಗೆ ೨೦-೪-೧೮೩೭ ರಂದು ಬರೆದದಿರುವ ಪತ್ರದಲ್ಲಿ ಬೆಳಗಾಂವಿಯ ಜಿಲ್ಲೆಯಾದ್ಯಂತ ಕನ್ನಡವನ್ನೇ ಆಡಳಿತ ಹಾಗೂ ವ್ಯವಹಾರದ ಭಾಷೆಯನ್ನಾಗಿ ಜಾರಿಗೆ ತರಲು ಆದೇಶ ಹೊರಡಿಸಿರುವುದನ್ನು ತಿಳಿಸಿದ್ದಾರೆ.

ಅಂತೆಯೇ ಆಗಿನ ಮುಂಬಯಿ ಗವರ್ನರ್ ಆರ್.ಗ್ರಾಂಟ್ ಅವರ ೧೯-೯-೧೮೩೭ರ ಪತ್ರವು ಕನ್ನಡಕ್ಕೆ ದೊರೆಯಲೇ ಬೇಕಾದ ಪ್ರಾಶಸ್ತ್ಯದ ಬಗ್ಗೆ ಮನವರಿಕೆ ಮಾಡಿದೆ. ಹೈದರಾಬಾದ್ ಸಂಸ್ಥಾನದಲ್ಲೂ ಕನ್ನಡದ ಪರಿಸ್ಥಿತಿಯು ಕೆಟ್ಟಿತ್ತು. ಅಲ್ಲಿ ಮರಾಠೀ ಭಾಷೆಯ ಜೊತೆಗೆ ಉರ್ದು ಭಾಷೆಯೂ ಪ್ರಭಾವಶಾಲಿಯಾಗಿತ್ತು. ಶಿಕ್ಷಣದಲ್ಲೂ ಉರ್ದುವೇ ಮುಖ್ಯವಾಗಿತ್ತು.

ಮೈಸೂರು ಸಂಸ್ಥಾನದಲ್ಲಿ ಮಾತ್ರ ಕನ್ನಡದ ಪರಿಸ್ಥಿತಿ ತೀರಾ ಹದಗೆಟ್ಟಿರಲಿಲ್ಲ.ಕನ್ನಡಿಗರೇ ಅಧಿಕವಾಗಿದ್ದ ಭಾಗಗಳಲ್ಲಿ ಕನ್ನಡ ಭಾಷೆಯ ಪರಿಸ್ಥಿತಿ ಇದಾದರೆ, ಕನ್ನಡ ಸಂಸ್ಕೃತಿಯ ಪರಿಸ್ಥಿತಿಯು ಮತ್ತಷ್ಟು ಹದಗೆಟ್ಟಿತ್ತು. ಕನ್ನಡ ಭಾಷೆ ಮತ್ತು ಆ ಮೂಲಕ ರೂಪುಗೊಳ್ಳುವ ಸಂಸ್ಕೃತಿಯನ್ನು ಉಳಿಸಲು ಕನ್ನಡಿಗರೇ ಹೆಚ್ಚು ವಾಸಿಸುವ ಪ್ರದೇಶಗಳನ್ನು ಒಂದೇ ಆಡಳಿತ ವ್ಯಾಪ್ತಿಗೆ ತರುವ
ಅಗತ್ಯ ಇತ್ತು. ಅದಕ್ಕಾಗಿ ಅವಶ್ಯಕ ವಾತಾವರಣ ನಿರ್ಮಾಣವಾದದ್ದು ೧೯೦೫ ರ ಸುಮಾರಿನಲ್ಲಿ.

(ಮಾಹಿತಿ ಮೂಲ:
ವಿಕಿಪೀಡಿಯಾ.)

🙏 *ಬಳಸೋಣ ಕನ್ನಡ* 🙏
🙏 *ಬೆಳೆಸೋಣ ಕನ್ನಡ*🙏
*ಉಳಿಸೋಣ‌ ಕನ್ನಡ*
🙏 *ಎಲ್ಲ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವ ದ ಹಾರ್ದಿಕ ಶುಭಾಶಯಗಳು.*
💛❤️💛❤️💛❤️💛❤️

18/10/2025
Photos from Anasyua. JS.'s post 18/10/2025

ನನ್ನ ಈ ಎರಡು ಪುಸ್ತಕಗಳು ಬೆಂಗಳೂರಿನ ಸ್ವಪ್ನ ಪುಸ್ತಕ ಮಳಿಗೆಯಲ್ಲಿ ಲಭ್ಯ ಇವೆ.ಆಸಕ್ತರು ಸಂಪರ್ಕಿಸಿ ಪಡೆಯಬಹುದು.
#ಅನಸೂಯ‌ #ಜಹಗೀರದಾರ.
ಲೇಖಕರು.

"ಒಡಲ ಬೆಂಕಿ" ಕವನ ಸಂಕಲನದ ಪರಿಚಯ 22/05/2025

https://aakrutikannada.com/odala-benki-book/?fbclid=IwY2xjawKcEmtleHRuA2FlbQIxMQABHi5U31jjrGs8wARaTAM-q335wpfijb3-zxCZOshvQ7GKNrt2MgvlOi3qDBPE_aem_-gQMSZwHShPUrCp9k79FHw

"ಒಡಲ ಬೆಂಕಿ" ಕವನ ಸಂಕಲನದ ಪರಿಚಯ ಅನಸೂಯಾ ಜಹಗೀರದಾರ ಅವರ "ಒಡಲ ಬೆಂಕಿ" ಕವನ ಸಂಕಲನವು ಸಮಾಜದ ಜೀವ ಝರಿಯು ಎತ್ತ ಹರಿದು ಸಾಗುತ್ತದೆನ್ನುವ ಒಳನೋಟವೇ ಕಾವ್ಯದ ಜೀವಾಳವಾಗಿದ....

18/05/2025

ದೂರ ದೃಷ್ಟಿ ಮತ್ತು ಸಮೀಪ ದೃಷ್ಟಿ ದೋಷಗಳು ಮತ್ತು ನಿವಾರಣೆ.
ಕೃಪೆ:- ವ್ಯಾಟ್ಸ್ಯಾಪನಿಂದ.ಈ ಶಿಕ್ಷಕರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.

Photos from Anasyua. JS.'s post 12/05/2025

ಮತ್ತೊಮ್ಮೆ ಈ ಕವಿತೆ.
ನನ್ನ ಭಗವಾನ್ ಬುದ್ಧನಿಗೆ ಕವಿತೆಯ ತೆಲುಗು ಅನುವಾದ ಸಿಂಹಪುರಿ ರೈತು ತೆಲುಗು ಪತ್ರಿಕೆಯಲ್ಲಿ ಪ್ರಕಟವಾಗಿದೆ.ಅನುವಾದಕರಾದ ಎಸ್ ಡಿ ಕುಮಾರ್ ಸರ್ ಅವರಿಗೆ ಧನ್ಯವಾದಗಳು.ಪ್ರಕಟಿಸಿದ ಪತ್ರಿಕಾ ಬಳಗಕ್ಕೆ ವಂದನೆಗಳು.

#ಕವಿತೆ
********
#ಭಗವಾನ್ #ಬುದ್ಧನಿಗೆ
*********************
ನೀನು ಅಂದು ಹೇಳಿದ
ಆಸೆಯೇ ದುಃಖದ ಮೂಲ
ಹೇಳಿಕೆಯಲ್ಲ ಮಂತ್ರವಾಗಿತ್ತು
ಎಂಥೆಂಥವರಿಗೂ..

ನಿರಾಶರಾಗುವುದಕ್ಕಿಂತ
ಈ ಮಂತ್ರ ಪ್ರತಿನಿತ್ಯ ಪಠಿಸಿದಲ್ಲಿ...
ವೃತೋಪಾದಿಯಲಿ ಅನುಸರಿಸಿದಲ್ಲಿ..
ಆಸೆಗಳೇ ದಿಕ್ಕಾಪಾಲು..!
ಶೂನ್ಯ ಭಾವ...
ಇಲ್ಲದ ರಾಗ ಎಲ್ಲವೂ ವಿರಾಗ..!

ಆದರೆ...,
ಜೀವಿಸುವ ಬಗೆ..ಎಂತು‌..?!
ಆಸೆಯ ಊರುಗೋಲೊಂದು
ಬೇಕಲ್ಲವೆ..
ಗೋರಿಗೆ ಹೋಗುವವರೆಗೆ..
ಸತ್ತು ಶವವಾಗುವವರೆಗೆ..

ಪ್ರಭುದ್ಧರಾಗಲೇ ಹೆಣಗುವ
ಈ ಕಾಲಘಟ್ಟದ ಹಂತಗಳಲಿ..
ಬುದ್ಧನಾಗುವುದು..
ಅದನ್ನು ಇಂತಹ
ಮಹಾನ್ ಭವಸಾರದ ಸಾಗರದಲಿ
ನಿಭಾಯಿಸುವುದು...ಸರಳವೆ..?!

ಆದಕ್ಕೆಂದೇ..
ನನಗನಿಸುತ್ತದೆ..,

ಬದುಕಲೇ ಬೇಕಾದಲ್ಲಿ..,
ಒಂದಿಷ್ಟು....
ಭವ್ಯ ಇಮೇಜಿನಲಿ
ಪ್ರಲೋಭನೆಗಳ ಓಟದಲಿ..
ಫ್ಯಾಂಟಸಿಯ ರಮ್ಯತೆಯಲಿ
ಬಣ್ಣದ ಮಾತುಗಳಲಿ
ಬಣ್ಣಿಸಿದ ಕಾವ್ಯಗಳಲಿ
ಒಲವ ಒರತೆಗಳಲಿ

ಬೇ
ಸತ್ತ ಮನ ರೀ ಚಾರ್ಜ್ ಆಗಲು..,

ಮೀಯಬೇಕು.
ಪುಳಕಗೊಂಡು ಪಲ್ಲವಿಸಬೇಕು..
ಹೀಗೆ..
ಇಲ್ಲದವುಗಳ ನೆನೆದು..

ಪ್ರತಿ ಚೈತ್ರ ಇರುವುದು ಪ್ರಕೃತಿಯಲಿ
ಅದಕ್ಕೆಂದೇ..
ಆಸೆಯೊಂದು ಕೊನರುತ್ತಿರಬೇಕು..
ಇಲ್ಲದಿರೆ
ಚೈತ್ರ ವೈಚಿತ್ರ್ಯವಾದೀತು..!

*ಅನಸೂಯ ಜಹಗೀರದಾರ*

09/04/2025

ಈ ಮೂರು...!!

Want your public figure to be the top-listed Public Figure in Koppal?
Click here to claim your Sponsored Listing.

Category

Website

Address


Koppal