A R J Creations

A R J Creations

Share

Education & literature channel

15/11/2024

28/10/2024

Please report the fake account using my profile details as spam, but don’t follow it...

01/10/2024

ನಿಮ್ಮನಿಯ್ಯಾಗ ಕನ್ಯಾವ ಏನ್ರೀ....

ಅಕ್ಷಯಕುಮಾರ ಜೋಶಿ
ಯುವ ಬರಹಗಾರ, ಹುಬ್ಬಳ್ಳಿ

ಹಿಂದಿನ ಕಾಲದಾಗ ವರ ಅವ ಏನ್ರಿ ನಿಮ್ಮ ಮನಿಯಾಗ, ನನ್ನ ಮಗಳಿಗ ಒಂದು ಚೋಲೋ ವರ ಇದ್ರ ಮರಿಬ್ಯಾಡ್ರೀ, ನಮ್ಗ ಏನು ಅತಿಯಾಸೆ ಇಲ್ರೀ ಮತ್ತ ವರಗ ಒಂದು ಹೇಳ್ಕೋಳಾಕ ಸರ್ಕಾರಿ ನೌಕರಿ-ಕೈ ತುಂಬ ಸಂಬಳ, ಅಪ್ಪ - ಅವ್ವಗ ಒಬ್ಬನ ಮಗ ಇದ್ರ ಆತರಿ ಅಂತೆಲ್ಲ ಹೇಳುದನ್ನ ಕೇಳತಿದ್ವೀ.
ಅದ ಇವತ್ತಿನ ಕಾಲದಾಗ ಎಲ್ಲಾ ಉಲ್ಟಾ ಆಗೇತಿ ನೀವ ಗುಡಿಗ ಹೋಗ್ರೀ, ಮದುವಿಗ ಹೋಗ್ರಿ, ಇನ್ನ ಜಾತ್ರಿ ಅನ್ಕೊಂತ ನೆಂಟರಿಷ್ಟರ ಮನಿಗ ಹೋಗ್ರೀ ಎಲ್ಲಾ ಕಡೆಗ ಹೋದಾಗನೂ ಅಲ್ಲೇ ಮಾತಾಡೋ ಮಾತಗಳ ಏನಂದ್ರ ನಿಮ್ಮ ಮನಿಯಾಗ ಕನ್ಯಾ ಅವೇನ್ರೀ.. ಅವ್ರ ತಮ್ಮ ಆಧಾರ ಕಾರ್ಡ್ ಎಷ್ಟ ಕಾಪಿ ತೆಗೆಸಿರತ್ತಾರೋ ಗೊತ್ತಿಲ್ರೀ, ತಮ್ಮ ಮಕ್ಕಳ ಕುಂಡಲಿ ಪೋಟೋನ ಅಷ್ಟ ಕಾಪಿ ತೆಗೆಸಿ ಎಲ್ಲಾಕಡೆ ಕೊಟ್ಟ ಬಂದಿರತಾರ..
ಹೊದ ಸೋಮವಾರ ದೇವಸ್ಥಾನಕ್ಕ ಹೋಗಿದ್ನಿರಿ.. ಅಲ್ಲೇ ಪದ್ಮಕ್ಕ ಮತ್ತ ಸಾವಿತ್ರಕ್ಕಂದ ಮಾತು ಕತಿ ಬಾಳ ಜೋರಾಗೀನ ನಡೆದಿತ್, ಅದರ ಬಗ್ಗೆ ಏನ ಕೇಳ್ತಿರಿ ಅವರಿಬ್ಬರಿಗ ದರ್ಶನ ಮಾಡಾಕ ಬಂದೀವಿ ಅಂತ ಲಕ್ಷ್ಯನ ಇಲ್ಲದ ಪದ್ಮಕ್ಕಗ ಸಾವಿತ್ರಕ್ಕ ಕೇಳಾತಿದ್ರ ರೀ...!! ನಿಮ್ಮ ಮನಿಯಾಗ ಮಗ ಇದ್ನಲ್ಲ ಮದ್ವಿ ಆತ ಏನ್ರಿ, ನಿಮ್ಮ ತಂಗಿ ಮಗ ಇದ್ನಲ್ಲ ಅವಂಗ ಕನ್ಯಾ ನೋಡ್ಲಿ ಕತಾರಂತ, ಅಷ್ಟ ಅಲ್ರಿ ಮೊನ್ನೆ ಮೂಲಿಮನಿ ನಂಜವ್ವ ಅವ್ಲ ಮಗಳ ಮದುವಿ ಪಿಕ್ಸ ಮಾಡಿದ್ಲು ಅಂತಲ್ರೀ...!! ಅಂತ ಒಂದ ಉಸಿರದಾಗ ಕೇಳಿಬಿಟ್ರ...

ಅಷ್ಟ ನಿಲ್ಲಿಸಿದ್ರ ಬಾಳ ಚೋಲೊ ಇತ್ತ, ಇಗ ಅವ್ರ ಕರೇ ಮ್ಯಾಟರ್ಗ ಬಂದ್ರ ನೋಡ್ರಿ ಅವರ ಹೇಳಾಕೊಂಟಿದ್ದು.. ನಮ್ಮ‌ ಮಗಾ ಅದಾನ, ದೊಡ್ಡ ಕಂಪನಿದಾಗ ಸಾಫ್ಟ್‌ವೇರ್ ಇಂಜಿನೀಯರ್‌ ಅಂತ ಹೇಳಿದ್ರ... ಇದಕ್ಕ ಸಾವಿತ್ರಕ ಉತ್ತರ ಕೊಡಲಿಲ್ಲಂದ್ರ ಹೆಂಗಾದಿತು...

ನಮ್ಮ ತಮ್ಮನ ಮಗಳ ಅದಾಳ ಆದ್ರ ಅವ್ರ ಯಾವ್ದರ ಆಗ್ಲಿ ಸರ್ಕಾರಿ ನೌಕರಿ ಇದ್ದವಂಗ ಕನ್ಯಾ ಕೊಡತೇನಿ ಅಂತ ಕುಂತಾರ ನೋಡ್ರೀ ಅಂತ ಸಾವಿತ್ರಕ್ಕ ಹೇಳ್ಬಿಟ್ಲು. ಇಷ್ಟಕ್ಕ ಸುಮ್ನ ಆಗಿದ್ರ ಚೋಲೊ ಆಗತಿತ್ತ್, ಹಿಂಗ ಮಾತು-ಕತಿ ಮುಂದವರದ ಅವರೊಂದು ಹೇಳೋದ ಇವರೊಂದು ಹೇಳೋದ ನಡೆದಿತ್ತ. ಇದನ್ಲೆಲ್ಲ ಕೇಳ್ಕೋಂತ ಅಲ್ಲೆ ನಿಂತಿದ್ದ ಆ ಗುಡಿಯ ಪೂಜಾರಿ ಯಾವ್ದರ ಕನ್ಯಾ ಇದ್ರ ಹೇಳ್ರೀ ನನ್ನ ಮಗಗ ಕನ್ಯಾ ನೋಡಾತೇನಿ ಅಂತ ಹೇಳಿ ಪೂಜಾ ಚಲೂ ಮಾಡಿದ್ರ..ಅಷ್ಟೊತ್ತಿಗ ಸುಮ್ನ ಕುಂದರದ ಸಾವಿತ್ರಕನೂ ಪದ್ಮಕ್ಕಗ ಹೇಳಿದನ್ನ RE Telecast ಮಾಡಿಬಿಟ್ಲು.... ಆಗ ಪೂಜಾರಿ ಮುಖಾನ ಗಂಟಹಾಕ್ಕೊಂಡ ತೀರ್ಥ ಕೊಟ್ಟ ಪ್ರಸಾದ ಕೊಟ್ಟ ಒಳಗ ನಡೆದಬಿಟ್ಟ.

ಅದಾತು ಬಿಡ್ರಿ ಇನ್ನ ಮೊನ್ನೆ ಒಂದು ಮದುವಿ ಕಾರ್ಯಕ್ರಮಕ್ಕ ಹೋಗಿದ್ವೀ, ಅಲ್ಲಿ ಹೇಳ್ತೀನಿ ನಿಮ್ಗ ಮದುವಿ ನಡಿಯೋದನ್ನ ನೋಡೋ ಬದ್ಲಿಗ ಗಂಡ ಮಕ್ಕಳ ಇದ್ದ ಅಪ್ಪ ಅಮ್ಮಂದ್ರು ಅಲ್ಲಿ ಚಂದಗ ಕಲರ ಕಲರ ಲಂಗಾ ದಾವನಿ ಹಾಕ್ಕೊಂಡ ಮೈತುಂಬ ಬಂಗಾರ ಹಾಕ್ಕೊಂಡ ಅತ್ತಿಂದ ಇತ್ತ ಇತ್ತಿಂದ ಓಡ್ಯಾಡತಿದ್ದ ಕನ್ಯಾಗೋಳ ನೋಡಕ್ಕೊಂತನ ಕುಂತಬಿಟ್ಟಿದ್ರು.. ಬೀಗತನ ಬೆಳಿಬೇಗಲ್ರಿ ಅದ್ಕ ಅವ್ರ ಅಪ್ಪ ಅವ್ವನ ಮಾತಾಡಿಸ್ಕೊಂತ, ನಿಮ್ಮ ಮಗಳ ಚಂದ ರೆಡಿಯಾಗಾಳ್ರೀ, ಏನ ಓದ್ಕೊಂಡಾಳ್ರೀ, ಮತ್ತ ವರ ನೋಡಾಕ ಚಾಲೂ ಮಾಡೀರೋ ಇಲ್ಲೋ ಇನ್ನ, ಮಾಡಿರತೀರಿ ಬೀಡ್ರೀ ಎದಿಯುದ್ದ ಬೆಳಿದ ಮಗಳನ್ನ ಮನಿಯಾಗ ಇಟ್ಕೊಳೋದ ಅಂದ್ರ ಹಂಗ ಏನ್ರೀ ಮತ್ತ.. ಹಿಂಗ ಒಂದ ಉಸಿರನ್ಯಾಗ ಹತ್ತಾರ ಪ್ರಶ್ನೆ ಕೆಳ್ಕೊಂತ ತಮ್ಮ ಮಗಂದ ಜಾತಕ, ಒಂದು ಪೋಟೊ ಕೊಟ್ಟ ಬಿಡೋದ.. ಇಷ್ಟರಾಗ ಅಲ್ಪೇ ಮದುವಿಗ ಬಂದವರದು ಮದುವಿ ಆಗಿ ಊಟದ ಕಡೆಗ ಮುಖ ಮಾಡಿರತಿದ್ರು..

ಇಷ್ಟ ಅಲ್ದ ಇವತ್ತಿನ ಆನ್ಲೈನ್ ಯುಗದಾಗ ಇವ್ರ ಇಲ್ಲೆ ಅವ್ರ ಅಲ್ಲೆ ಇದ್ಕೊಂಡ ವರ-ಕನ್ಯಾ ನೋಡಾಕ ಚಾಲೂ ಮಾಡ್ಯಾರೀ.., ಇನ್ನ ಪ್ರೀತಿ ಮಾಡೋದ ಅಂದ್ರ ಒಂದ ಪ್ರೇಮಪತ್ರ ಅನ್ಕೊಂತ ಹಿಂದಿನ ಕಾಲದಾಗ ಚಾಲೂ ಆಗಿದ್ದ ಇವತ್ತ ಪೇಸ್ಬುಕ್, ಇನ್ಸ್ಟಾ, ಆದ-ಇದ ಅನ್ಕೊಂತ ಮಾತಾಡಾಕಂತೇನ ಹತ್ತಾರ ಹುಟ್ಕೊಂಡಾವ.

ಇಷ್ಟೆಲ್ಲ ನಡಿಯಾಕತಿದ್ರೂ, ಟೆಕ್ನಾಲಜಿ ಇಷ್ಟೆಲ್ಲ ಬದಲಾದ್ರು, ಯಾವುದರ ಮದುವಿ-ಮುಂಜವಿ, ಅಷ್ಟ ಯಾಕ್ರೀ ಯಾರರ ಮನಿಗ ಪೂಜ್ಯಾಕ ಅಂತ ಹೋದ್ರ ಅಂದ್ರ ಅಲ್ಲಿನೂ ಕೇಳಿಬರೋದ‌ ಒಂದ ಒಂದುss ಮಾತ್ *ನಿಮ್ಮನ್ಯಾಗ ಕನ್ಯಾ ಅವ ಏನ್ರೀ......

15/09/2024

The littlest feet make the biggest footprints on our hearts.
Baby boy arrived today our Family...
Mr.ARJ

06/03/2024

I have reached 500 followers! Thank you for your continued support. I could not have done it without each of you. 🙏🤗🎉

ವನಮಾತೆ|Poem Reading|AkshaykumarJoshi 25/12/2023

https://youtu.be/LAp3InyomI8?si=E5ASaqBGcDWx5wfl
* * #

ವನಮಾತೆ|Poem Reading|AkshaykumarJoshi Kavana|Vanamate|Poem ReadingLike|Share|Subscribe ARJ Creations Channelfor More Videos Subscribe Channel ...

23/08/2022

*ಹಂಪಿ ಪ್ರವಾಸಿ ತಾಣ* ಕುರಿತ ಲೇಖನ ಪ್ರಕಟಗೊಂಡಿದೆ ಓದಿ ಅಭಿಪ್ರಾಯ ತಿಳಿಸಿ
ಅರಜೋ✍🏼

02/04/2022

*"ಮರಳಿ ಬರುತಿದೆ ಯುಗಾದಿ"* ಲೇಖನ
*ಸರ್ವರಿಗೂ‌ ಯುಗಾದಿ ಹಬ್ಬದ ಶುಭಾಶಯಗಳು*💐

ಪರಿಸರ ಪ್ರೇಮಿಯ ಪಯಣ #Interview #Worldenvironmentalday #Special episode 05/06/2021

https://youtu.be/_JFVOINdr_Q
ಪರಿಸರ ಪ್ರೇಮಿ ಪಂಡಿತ ಮುಂಜಿಯವರ ಸಂದರ್ಶನ ತಾವು ನೋಡುವುದರೊಂದಿಗೆ ಇತರರೊಂದಿಗೂ ಹಂಚಿಕೊಳ್ಳಿ.
ಯಾರೆಲ್ಲ ಚಾನೆಲ್ Subscribe ಆಗಿಲ್ಲ ಕೂಡಲೇ ಮಾಡಿಕೊಳ್ಳಿ, ನನ್ನ ಎಲ್ಲ ಹೊಸ ವಿಡಿಯೋಗಳನ್ನು ತಾವು ವೀಕ್ಷಿಸಬಹುದು.

#ಸರ್ವರಿಗೂವಿಶ್ವಪರಿಸರದಿನದಶುಭಾಶಯಗಳು



ಅರಜೋ..

ಪರಿಸರ ಪ್ರೇಮಿಯ ಪಯಣ #Interview #Worldenvironmentalday #Special episode ವಿಶ್ವ ಪರಿಸರ ದಿನ ವಿಶೇಷ ಸಂಚಿಕೆಯ ಸಂದರ್ಶನ ಕಾರ್ಯಕ್ರಮ ಗಿಡಮರಗಳನ್ನು ಬೆಳೆಸುತ್ತ ಬರವನ್ನು ಹೋಗಲಾಡಿಸಬೇಕಾಗಿದೆ. ಪ್ರಕೃತಿ ಮಾತೆ ....

Want your school to be the top-listed School/college in Hubli?
Click here to claim your Sponsored Listing.

Telephone

Address


Deshapande Nagar
Hubli
580029