Beedi Geleyaru Rangatanda
Contact information, map and directions, contact form, opening hours, services, ratings, photos, videos and announcements from Beedi Geleyaru Rangatanda, Performance Art Theatre, Bangalore.
15/01/2026
ಭೂಮಿ ನಗುತಿರಲಿ, ಬೆಳೆ ಕೈ ತುಂಬಿರಲಿ 🌾
ರಂಗದ ದೀಪ ಬೆಳಗಿ, ಜನರ ಮನ ತುಂಬಿರಲಿ 🎭
ನಮ್ಮ ನಾಟಕಗಳಿಗೆ ಉಸಿರಾದ ಪ್ರೇಕ್ಷಕರಿಗೂ, ಕರ್ನಾಟಕದ ಜನರೆಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
ಬೆಳೆ, ಬೆಳ್ಳಿ, ಬೆರಗು ಎಲ್ಲರ ಬದುಕಲ್ಲೂ ಒಟ್ಟಾಗಿ ಬರಲಿ.
– ಬೀದಿ ಗೆಳೆಯರು ರಂಗತಂಡ
Let the earth smile, let the harvest fill our hands 🌾
May the stage lamp glow bright, and hearts overflow with warmth 🎭
Makara Sankranti wishes to our beloved audience and to the people of Karnataka.
May abundance, joy, and togetherness walk hand in hand in every home.
– Beedi Geleyaru Theatre Team
#ಸಂಕ್ರಾಂತಿ #ಮಕರಸಂಕ್ರಾಂತಿ #ಬೀದಿಗೆಳೆಯರು #ರಂಗಭೂಮಿ
01/01/2026
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು
28/12/2025
🎭 ರಂಗಭೂಮಿ ಪ್ರೀಮಿಯರ್ ಲೀಗ್ 7 (2025) 🎭
ಅದ್ಭುತವಾಗಿ, ಯಶಸ್ವಿಯಾಗಿ ಮುಕ್ತಾಯಗೊಂಡಿದೆ! 🙌
ಈ ಪಂದ್ಯಾವಳಿಯಲ್ಲಿ ನಮ್ಮ ಬೀದಿ ಗೆಳೆಯರು ತಂಡ ಅದ್ಭುತ ಪ್ರದರ್ಶನ ನೀಡಿ ರನ್ನರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ನಮಗೆ ಅಪಾರ ಹೆಮ್ಮೆ 💪🔥
ಮೈದಾನದಲ್ಲಿ ಶ್ರಮ, ಶಿಸ್ತು ಮತ್ತು ತಂಡಭಾವನೆ ತೋರಿದ ಬೀದಿ ಗೆಳೆಯರು ತಂಡದ ಎಲ್ಲಾ ಆಟಗಾರರು ಹಾಗೂ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳು 🙏👏
👕 ಬೀದಿ ಗೆಳೆಯರು ತಂಡಕ್ಕೆ ಜೆರ್ಸಿ ಸ್ಪಾನ್ಸರ್ ಮಾಡಿದ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು ❤️
🏆 ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ನೀಡಿ, ಅದನ್ನು ಯಶಸ್ವಿಯಾಗಿ ಆಯೋಜಿಸಿದ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು 🌟
🤝 ಬೀದಿ ಗೆಳೆಯರು ತಂಡದೊಂದಿಗೆ ಅಭ್ಯಾಸಕ್ಕೆ ಸಹಕರಿಸಿದ
, , .theater ಹಾಗೂ ತಂಡಗಳಿಗೆ ಸಹ ಹೃತ್ಪೂರ್ವಕ ಧನ್ಯವಾದಗಳು 💐
ಒಟ್ಟಿಗೆ ನಿಂತು, ಒಟ್ಟಿಗೆ ಬೆಳೆದ ಈ ಪ್ರಯಾಣ ಸದಾ ನೆನಪಿನಲ್ಲಿ ಉಳಿಯಲಿದೆ 💫
ರಂಗಭೂಮಿ – ನಮ್ಮ ಹೆಮ್ಮೆ, ನಮ್ಮ ಗುರುತು 🎭❤️
TeamWork
12/05/2025
🎉 ರಂಗಭೂಮಿ ಬ್ಯಾಡ್ಮಿಂಟನ್ ಲೀಗ್ 2025
– ಒಂದು ಯಶಸ್ವಿ ಪ್ರಯತ್ನ, ಒಂದು ಸ್ಮರಣೀಯ ಅನುಭವ – 🏸
ರಂಗಭೂಮಿ ತಂಡಗಳ ನಡುವೆ ಸಮರಭರಿತವಾಗಿ, ಸೌಹಾರ್ದಪೂರ್ಣವಾಗಿ ನಡೆದ ಬ್ಯಾಡ್ಮಿಂಟನ್ ಲೀಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿ ತಂಡಕ್ಕೂ ನಮ್ಮ ಹೃದಯಪೂರ್ವಕ ಅಭಿನಂದನೆಗಳು. ನೀವು ತೋರಿಸಿದ ಉತ್ಸಾಹ, ಶ್ರದ್ಧೆ ಮತ್ತು ಕ್ರೀಡಾ ಮನೋಭಾವ ನಿಜಕ್ಕೂ ಶ್ಲಾಘನೀಯ.
🌟 ವಿಶೇಷವಾಗಿ, ರೋಮಾಂಚಕ ಕ್ಷಣಗಳಿಂದ ತುಂಬಿದ್ದ ಫೈನಲ್ ಪಂದ್ಯವನ್ನು ಗೆದ್ದು ಚಾಂಪಿಯನ್ ಪಟ್ಟದ ಮೇಲೆ ಅಡಿಗಾಲಿಟ್ಟ "ಅಭಿನಯ ತರಂಗ" ತಂಡದ ಸದಸ್ಯರಿಗೆ ಅಭಿನಂದನೆಗಳು! ನಿಮ್ಮ ಗೆಲುವು ನೈಪುನ್ಯ, ಸಮರ್ಪಣೆ ಮತ್ತು ತಂಡಗಳ ಜೊತೆಗೆ ಬೆಸೆದ ಬಾಂಧವ್ಯದ ತಾಜಾ ಉದಾಹರಣೆಯಾಗಿದೆ. 🎉🏆
👏 ಅದಷ್ಟೇ ಅಲ್ಲದೆ, ಪ್ರಬಲ ಸ್ಪರ್ಧೆಯ ನಡುವೆಯೂ ಮೂರನೆಯ ಅಂತಿಮ ಮಟ್ಟದವರೆಗೆ ಪೈಪೋಟಿ ನೀಡಿದ "ಎಸ್‌ಟಿಡಿ" ತಂಡವು ದ್ವಿತೀಯ ಬಹುಮಾನವನ್ನು ಗೆದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಿಮ್ಮ ತಂಡಕ್ಕೂ ನಮ್ಮ ಹಾರ್ದಿಕ ಅಭಿನಂದನೆಗಳು ಮತ್ತು ಮುಂದಿನ ಯಶಸ್ಸಿಗೆ ಶುಭಾಶಯಗಳು. ✨
ಈ ಕಾರ್ಯಕ್ರಮವು ಕೇವಲ ಒಂದು ಕ್ರೀಡಾ ಸ್ಪರ್ಧೆಯಲ್ಲ. ಇದು ರಂಗಭೂಮಿಯೊಳಗಿನ ಕಲಾವಿದರು, ನಿರ್ವಾಹಕರು, ಕ್ರೀಡಾಪಟುಗಳು ಮತ್ತು ಸ್ನೇಹಿತರೆಲ್ಲರನ್ನು ಒಟ್ಟಿಗೆ ತಂದು ಕೇವಲ ಸ್ಪರ್ಧೆಯಲ್ಲದೇ, ಒಕ್ಕುಟ ಮತ್ತು ಉತ್ಸಾಹದ ಹಬ್ಬವನ್ನೇ ರೂಪಿಸಿತು.
ಇದೊಂದು ಸಣ್ಣ ಪ್ರಯತ್ನವಾಗಿದ್ದರೂ ಸಹ, ಅದರ ಫಲಿತಾಂಶ ದೊಡ್ಡದಾಗಿದೆ – ಸ್ನೇಹ, ಸಹಕಾರ ಮತ್ತು ಸೃಜನಶೀಲತೆಯ ಪ್ರೇರಣೆಯಾಗಿರುವ ಈ ಪ್ರಯೋಗ ಇನ್ನೂ ಹೆಚ್ಚು ಶಕ್ತಿ ಪಡೆದು ಮುಂದುವರೆಯಲಿ ಎಂಬ ನಂಬಿಕೆ ನಮ್ಮದು.
ಮುಂದಿನ ದಿನಗಳಲ್ಲಿ ಇಂತಹ ಇನ್ನೂ ಅನೇಕ ಸಾಂಸ್ಕೃತಿಕ ಹಾಗೂ ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ, ರಂಗಭೂಮಿಯ ಬಾಂಧವ್ಯವನ್ನು ಬಲಪಡಿಸುವ ಆಶಯವಿದೆ.
ದನ್ಯವಾದಗಳೊಂದಿಗೆ,
ಬೀದಿ ಗೆಳೆಯರು
10/05/2025
ಬೀದಿ ಗೆಳೆಯರು (ರಿ) ಹಾಗು ಕ್ರಾನಿಕಲ್ಸ್ ಆಫ್ ಇಂಡಿಯಾ (ರಿ) ಅರ್ಪಿಸುವ ರಂಗಭೂಮಿ ಬ್ಯಾಡ್ಮಿಂಟನ್ ಲೀಗ್ 2025
19/04/2024
ಬೀದಿ ಗೆಳೆಯರು ಅರ್ಪಿಸುವ
ಆಕಾಶವಾಣಿ ಈರಣ್ಣ ಎ. ಎಸ್ ಮೂರ್ತಿ ವಿರಚಿತ "ಗೆಜೆಟೆಡ್ ಆಫೀಸರ್" ಎಂಬ ನಾಟಕವನ್ನು,
ಇದೆ ಮೇ 4, ಶನಿವಾರ ಸಂಜೆ 7 30ಕ್ಕೆ
ವಾಡಿಯಾ ಸಭಾಂಗಣ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ ಪಿ ವಾಡಿಯಾ ರಸ್ತೆ, ಬಸವನಗುಡಿಯಲ್ಲಿ ನಾಟಕದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೀದಿ ಗೆಳೆಯರು ರಂಗ ತಂಡವನ್ನು ಪ್ರೋತ್ಸಾಹಿಸಿ.
ಟಿಕೆಟ್ಗಳಿಗಾಗಿ ಸಂಪರ್ಕಿಸಿ - 9738106282
ಆನ್‌ಲೈನ್ - https://in.bookmyshow.com/plays/gazetted-officer-kannada-drama/ET00393138
ಟಿಕೆಟ್ ಬೆಲೆ - 150 ರೂ
ಧನ್ಯವಾದಗಳೊಂದಿಗೆ
ಬೀದಿ ಗೆಳೆಯರು ತಂಡ
10/04/2024
ಬೀದಿ ಗೆಳೆಯರು ತಂಡದ ಮೊದಲ ಪ್ರಯೋಗ ಆಕಾಶವಾಣಿ ಈರಣ್ಣ ಎ ಎಸ್ ಮೂರ್ತಿ ಅವರ "ಗೆಜೆಟೆಡ್ ಆಫೀಸರ್" ನಾಟಕದ ಮೊದಲ ಪ್ರದರ್ಶನ ಸುಚಿತ್ರ ಫಿಲಂ ಸೊಸೈಟಿಯ ನಾಣಿ ಅಂಗಳದಲ್ಲಿ ಏಪ್ರಿಲ್ 5ರಂದು ಪ್ರದರ್ಶಿಸಲಾಯಿತು. ನಾಟಕದ ಕೆಲವು ಛಾಯಾಚಿತ್ರಗಳು..
ಚಿತ್ರಕೃಪೆ :
.m17 .sharma.58 .sanath
09/04/2024
ಯುಗಾದಿ ಹಬ್ಬದ ಶುಭಾಶಯಗಳು..
05/04/2024
ಬೀದಿ ಗೆಳೆಯರು ತಂಡದ ಮೊದಲ ಪ್ರಯೋಗ ಆಕಾಶವಾಣಿ ಈರಣ್ಣ ಎ. ಎಸ್. ಮೂರ್ತಿ ವಿರಚಿತ "ಗೆಜೆಟೆಡ್ ಆಫೀಸರ್" ನಟಕದ ಮೊದಲ ಪ್ರದರ್ಶನ ತುಂಬಿದ ರಂಗಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನವಾಯಿತು.
27/03/2024
ವಿಶ್ವ ರಂಗಭೂಮಿ ದಿನದ ಶುಭಾಶಯಗಳು..
Click here to claim your Sponsored Listing.
Category
Website
Address
Bangalore